ಕಾಸರಗೋಡು: ಬಳಾಲ್ ಪಂಚಾಯತಿ ಕೋಟಕ್ಕುನ್ನು ಮತ್ತು ನಂಬಿಯಾರ್ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ಜೀವಹಾನಿ ಸಂಭಿಸಿಲ್ಲ ಎಂದು ತಿಳಿದುಬಂದಿದೆ. ನಂಬಿಯಾರ್ ಹಿಲ್ ಕಾಲನಿ ಬಳಿ ಶನಿವಾರ ಮಧ್ಯಾಹ್ನ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ ನಂಬಿಯಾರ್ ಮಲ ರಸ್ತೆ ಕುಸಿದಿದೆ. ವೆಳ್ಳರಿಕುಂಡು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಆ ಪ್ರದೇಶದ ಆರು ಜನರಿದ್ದ ಕುಟುಂಬವೊಂದನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿದರು.
ಇಂದು ಮಧ್ಯಾಹ್ನ 3 ಗಂಟೆಗೆ ಭೂಕುಸಿತ ಸಂಭವಿಸಿದೆ. ಭಾರೀ ಮಳೆಯಲ್ಲಿ ಬೆಟ್ಟದ ತುದಿಯಿಂದ ಕಲ್ಲುಗಳು ಮತ್ತು ಮಣ್ಣು ಸ್ಫೋಟಗಳೊಂದಿಗೆ ಕೆಳಗುರುಳಿದವು. ಬಾಳಾಲ್ ರಾಜಪುರಂ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಪ್ರದೇಶದ ಮೂರು ಮನೆಗಳು ಅಪಾಯದಲ್ಲಿದೆ. ಕಾಸರಗೋಡು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ಕಾಞಂಗಾಡ್ ನಗರ ಪ್ರವಾಹಕ್ಕೆ ತತ್ತರಗೊಂಡಿದೆ.
ಮುಂದಿನ ನಾಲ್ಕು ದಿನಗಳವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರಿ ಮಳೆಯ ಹಿನ್ನೆಲೆಯಲಲಿ ಕಾಸರಗೋಡು ಸೇರಿದಂತೆ ಆರು ಜಿಲ್ಲೆಗಳಲ್ಲಿ ಆರೆಂಜ್ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಹೊಸ ಕಡಿಮೆ ಒತ್ತಡ ವಾಯುಭಾರ ನಿನ್ಮತೆಯಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ.





