HEALTH TIPS

ಕೇರಳದಲ್ಲಿ ಇಂದು 8,135 ಜನರಿಗೆ ಕೋವಿಡ್; ಸಂಪರ್ಕದ ಮೂಲಕ 7,013 ಮಂದಿಗೆ ಸೋಂಕು-ಭಾರತದ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ರಾಜ್ಯದಲ್ಲಿ ಸೋಂಕು


          ತಿರುವನಂತಪುರ: ಕೇರಳದಲ್ಲಿ ಕೋವಿಡ್ ಸೋಂಕು ತೀವ್ರ ಕಳವಳಕಾರಿಯಾಗಿ ಮುಂದುವರಿಯುತ್ತಿದ್ದ 8,135 ಜನರಲ್ಲಿ ಇಂದು ಸೋಂಕು ದೃಢಪಡಿಸಲಾಗಿದೆ.  ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಇದುವರೆಗೆ ಎರಡು ಲಕ್ಷ ದಾಟಿದೆ. ರಾಜ್ಯದಲ್ಲಿ ಇಂದು 29 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿನಿಂದ 2,828 ಜನರು ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 7,013 ಜನರಿಗೆ ಕೋವಿಡ್ ಸೋಂಕು ತಗಲಿತು. 730 ಜನರಲ್ಲಿ ರೋಗದ ಮೂಲ ಸ್ಪಷ್ಟವಾಗಿಲ್ಲ. 24 ಗಂಟೆಗಳಲ್ಲಿ 59,157 ಮಾದರಿಗಳನ್ನು ಪರೀಕ್ಷಿಸಲಾಯಿತು. ಪ್ರಸ್ತುತ 72332 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 

       ಕೋವಿಡ್ ಸೋಂಕಿನ ಇಂದಿನ ಜಿಲ್ಲಾವಾರು ಅಂಕಿಅಂಶಗಳು:

       ಕೋಝಿಕ್ಕೋಡ್ 1072, ಮಲಪ್ಪುರಂ 968, ಎರ್ನಾಕುಳಂ 934, ತಿರುವನಂತಪುರ 856, ಆಲಪ್ಪುಳ 804, ಕೊಲ್ಲಂ 633, ತ್ರಿಶೂರ್ 613, ಪಾಲಕ್ಕಾಡ್ 513, ಕಾಸರಗೋಡು 471, ಕಣ್ಣೂರು 435, ಕೊಟ್ಟಾಯಂ 340, ಪತ್ತನಂತಿಟ್ಟು 223, ವಯನಾಡ್ 143, ಇಡುಕ್ಕಿ 130 ಮಂದಿಗೆ ಸೋಂಕು ಬಾಧಿಸಿದೆ. 

       ಇಂದು ಒಟ್ಟು 29 ಕೋವಿಡ್ ಸಾವುಗಳು:

    ಇಂದು ಕೋವಿಡ್ ಸೋಂಕಿನ ಕಾರಣ ರಾಜ್ಯಾದ್ಯಂತ ಇದೇ ಮೊದಲ ಬಾರಿಗೆ ಅತೀ ಹೆಚ್ಚಿನ ಸಾವು ಸಂಭವಿಸಿದ್ದು 29 ಮಂದಿ ಸೋಂಕಿನ ಕಾರಣ ಮೃತಪಟ್ಟಿದ್ದಾರೆ. ತಿರುವನಂತಪುರ ಪಳ್ಳಿತುರಾದ ಅಬ್ರಹಾಂ (62), ಪುಲ್ಲುವಿಳದ ಶರ್ಮಿಳಾ (52), ನೆಡುಮಾಂಗಾಡ್ ನ ವೇಲಾಯುಧ ಕುರುಪ್ (92), ಮುರಿಂಗವಿಳಕಂನ ಮೋಹನನ್ ನಾಯರ್ (75), ನೆಯ್ಯಾಟಿಂಗರದ  ಸುಧಾಕರನ್ ದಾಸ್ (61), ಪಾರಶಾಲಾದ ಸುಕುಮಾರನ್ (73). ಚಾಲದ ಹಶೀರ್(45), ಅಟ್ಟೀಮಗಲ್ ನ ವಿಜಯಕುಮಾರನ್(61), ಕೊಟ್ಟೂರ್ ನ ರಾಜನ್(82), ಕೊಲ್ಲಂ ಕೀರಿಪ್ಪುಳದ ತಂಗಮ್ಮ(67), ಪರವೂರ್ ನ ಮೋಹನನ್ (62),ಕರುನಾಗಪ್ಪಳ್ಳಿಯ ಸಲೀಂ(55), ಆಲಪ್ಪುಳ ಅಂಬಲಕುಳಂಙರದ ಮನೋಹರನ್(60), ಎರ್ನಾಕುಳಂ ಎಲತ್ತಿಕ್ಕುಳಿಯ ಕೆ.ವಿ.ಮೋಹನನ್(62), ಚೆಲಮ್ಮಟ್ಟಂನ ಕೆ.ಎ. ಕೃಷ್ಣನ್ (59), ವಚ್ಚಂಕುಳದ ಅಲ್ಫೊನ್ಸ್ (57), ಎರ್ನಾಕುಳದ  ರಿಸಿಕಿ ಆಂಡ್ರೂದೂರಮ್ (67), ವಯಲಂನ ವಿಶ್ವಂಭರನ್ (92), ಅಲುವಾದ ನಬೀಸಾ (73), ಪಲ್ಲುರುತಿಯ ಕುಂಜುಮೊನ್ (57)  ವರಪ್ಪುಳದ ಕೆ.ಪಿ. ಜೋರ್ಜ್(85),  ತ್ರಿಶೂರ್À ಒಟ್ಟಪ್ಲಾವ್ ನ ಅಬೂಬಕರ್ ರಹಮಾನ್ (55), ತ್ರಿಶೂರ್‍ನ ಬಲರಾಮನ್ (53), ಚೆರ್ಪು ನಿವಾಸಿ ಭಾಸ್ಕರನ್ (85), ಗುರುವಾಯೂರಿನ ಲೈಲಾ (56), ಕಲ್ಲೂರಿನ ಲಿಝಿ (70), ಕಾಸರಗೋಡು ಚೆಂಗಳದ ಬಿ.ಕೆ.ಖಾಲಿದ್(64), ಮೇಲ್ಪರಂಬದ ಕುಮಾರನ್(62), ಮಂಗಲ್ಪಾಡಿಯ ಖದೀಜುಮ್ಮ (90) ಎಂಬವರು ಕೋವಿಡ್ ನಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿದೆ. ಈ ಮೂಲಕ  ಒಟ್ಟು ಸಾವಿನ ಸಂಖ್ಯೆ 771 ಕ್ಕೆ ಏರಿಕೆಯಾಗಿದೆ. 

          ಸಂಪರ್ಕದ ಮೂಲಕ ಸೋಂಕು ಇಂದು ಒಟ್ಟು 7,013:

    ಇಂದು ರೋಗನಿರ್ಣಯ ಮಾಡಿದವರಲ್ಲಿ 67 ಮಂದಿ ವಿದೇಶಗಳಿಂದ ಮತ್ತು 218 ಇತರ ರಾಜ್ಯಗಳಿಂದ ಬಂದವರು. 7013 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗಲಿತು. 730 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 1013, ಮಲಪ್ಪುರಂ 879, ಎರ್ನಾಕುಳಂ 740, ತಿರುವನಂತಪುರ 708, ಆಲಪ್ಪುಳ 774, ಕೊಲ್ಲಂ 620, ತ್ರಿಶೂರ್ 603, ಪಾಲಕ್ಕಾಡ್ 297, ಕಾಸರಗೋಡು 447, ಕಣ್ಣೂರು 279, ಕೊಟ್ಟಾಯಂ 316,ಪತ್ತನಂತಿಟ್ಟು 135, ವಯನಾಡ್ 135, ಇಡುಕ್ಕಿ 67 ಮಂದಿಗೆ ಸಂಪರ್ಕದ ಮೂಲಕ ಸೋಂಕು ಉಂಟಾಗಿದೆ. 

         ದೇಶದಲ್ಲೇ ಕೇರಳದಲ್ಲಿ ಗರಿಷ್ಠ ಮಟ್ಟದ ಕೋವಿಡ್-ಪರೀಕ್ಷೆಗಳ ಸಂಖ್ಯೆ ಕಡಿಮೆ ಎಂದ ಐಎಂಎ:

    ದೇಶದಲ್ಲಿ ಕೋವಿಡ್ ಪ್ರಕರಣಗಳು ಕೇರಳದಲ್ಲಿ ಅತಿ ಹೆಚ್ಚು ಈಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಸಿದೆ. ಐಎಂಎ ಅಧ್ಯಯನದ ಪ್ರಕಾರ, ಕೇರಳದಲ್ಲಿ ಬೆಳವಣಿಗೆಯ ದರವು ಭಾರತದ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ದರ 11 ಆಗಿದ್ದರೆ, ಕೇರಳದಲ್ಲಿ ಕಳೆದ ಏಳು ದಿನಗಳ ದರ 28 ಆಗಿದೆ. ವರದಿಯ ಪ್ರಕಾರ, 30 ದಿನಗಳ  ಬೆಳವಣಿಗೆಯ ದರ ರಾಷ್ಟ್ರೀಯವಾಗಿ 45 ಮತ್ತು ಕೇರಳದಲ್ಲಿ 98 ಆಗಿದೆ. ಐಎಂಎ ಅಧ್ಯಯನವು ಕೇರಳದಲ್ಲಿ ಪರೀಕ್ಷೆಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ ಮತ್ತು ಕೆಲವು ಜಿಲ್ಲೆಗಳಲ್ಲಿ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ ಎಂದು ಕಂಡುಹಿಡಿದಿದೆ.


    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries