HEALTH TIPS

ಕೇರಳದಲ್ಲಿ ತರಗತಿ ಪುನರಾರಂಭಿಸಲು ಮತ್ತಷ್ಟು ಕಾಯಬೇಕು-ಮುಖ್ಯಮಂತ್ರಿ

         ತಿರುವನಂತಪುರ: ರಾಜ್ಯದಲ್ಲಿ ಶಾಲೆ ಪುನರಾರಂಭಿಸಲು ಕಾಲ ಪಕ್ವವಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ರಾಜ್ಯದ ವಿವಿಧ ಶಾಲೆಗಳಿಗಾಗಿ ನಿರ್ಮಿಸಲಾದ ಹೈಟೆಕ್ ಕೊಠಡಿಗಳು ಹಾಗೂ ಲ್ಯಾಬ್ ವ್ಯವಸ್ಥೆಯನ್ನು ಸೋಮವಾರ ವಿಡಿಯೋ ಕಾನ್‍ಫರೆನ್ಸ್ ಮೂಲಕ ತಿರುವನಂತಪುರದಲ್ಲಿ ಉದ್ಘಾಟಿಸಿ ಮಾತನಾಡಿದರು. 

          ಕೋವಿಡ್-19 ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಲಾತರಗತಿ ತೆರೆದು ಕಾರ್ಯಾಚರಿಸಲು ಸ್ವಲ್ಪಕಾಲ ಕಾಯಬೇಕಾಗಿದೆ. ಶಾಲಾ ಕಾಲೇಜು ತೆರೆದು ಕಾರ್ಯಾಚರಿಸದಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗದಿರಲು ಆನ್‍ಲೈನ್ ತರಗತಿಯನ್ನು ಆರಂಭಿಸಲಾಗಿದೆ. ಶಾಲಾ ಕೊಠಡಿಗಳನ್ನು ಹೈಟೆಕ್‍ಗೊಳಿಸುವುದರ ಜತೆಗೆ ಲ್ಯಾಬ್‍ಗಳನ್ನು ಮೇಲ್ದರ್ಜೆಗೇರಿಸುವುದರಿಂದ ಮುಂದಿನ ಪೀಳಿಗೆಗೆ ಉಪಕಾರಪ್ರದವಾಗಲಿರುವುದಾಗಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries