HEALTH TIPS

ಕೇರಳ ಜೆಡಿಎಸ್ ಘಟಕ ವಿಸರ್ಜಿಸಿದ ದೇವೇಗೌಡ: ಹೊಸ ಅಧ್ಯಕ್ಷರ ನೇಮಕ

     ಬೆಂಗಳೂರು: ಪಕ್ಷ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ ಹಿನ್ನಲೆ ಕೇರಳದ ಜೆಡಿಎಸ್​ ಘಟಕವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಸರ್ಜಿಸಿದ್ದಾರೆ.

   ಕೇರಳದ ಜೆಡಿಎಸ್​ ರಾಜ್ಯ ಘಟಕ ಅಧ್ಯಕ್ಪರಾಗಿರುವ ಸಿಕೆ ಸಾನು,  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಕುರಿತು ಕಾರಣಕೇಳಿ ನೋಟಿಸ್​ ಕೂಡ ಜಾರಿ ಮಾಡಲಾಗಿತ್ತು. ಆದರೆ, ಇದಕ್ಕೆ ಅವರಿಂದ ಉತ್ತರ ಬಂದಿಲ್ಲ. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಸಚಿವ ಮ್ಯಾಥ್ಯು ಟಿ ಥಾಮಸ್​ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಜೆಡಿಎಸ್​ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿರುವ ಬಿಎಂ ಫಾರೂಖ್​​ ಸೆ.24ರಂದು ಕಾರಣ ಕೇಳಿ ಸಿಕೆ ನಾನು ಅವರಿಗೆ ನೋಟಿಸ್​ ಜಾರಿ ಮಾಡಿದ್ದರು. ಈ ನೋಟಿಸ್​ಗೆ ಉತ್ತರಿಸದ ಅವರು ಯಾವುದೇ ನಿರ್ದೇಶನಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದರು. 

     ಸಿಕೆ ಸಾನು ರಾಜ್ಯ ಘಟಕವನ್ನು ಬಲಪಡಿಸುವ ಬದಲು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದು, ಪಕ್ಷ ರಚಿಸಿದ ಪ್ರಮುಖ ಸಮಿತಿಗಳನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries