HEALTH TIPS

ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದೂಟದ ಕಿಟ್ ವಿತರಣೆ ಆರಂಭ-ಅಕ್ಕಿ ಸೇರಿದಂತೆ ಎಂಟು ಆಹಾರ ವಸ್ತುಗಳು ಮನೆಗೆ

     

       ತಿರುವನಂತಪುರ: ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಅಂಗವಾಗಿ ವಿತರಿಸಲಾಗುವ ಆಹಾರ ಕಿಟ್‍ಗಳ ವಿತರಣೆಗೆ ಶನಿವಾರ ಅಧಿಕೃತ ಚಾಲನೆ ನೀಡಲಾಗಿದೆ. ರಾಜ್ಯ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಅವರು ವಿಡಿಯೋ ಕಾನ್ಫರೆನ್ಸ್  ಮೂಲಕ ಕಿಟ್‍ಗಳ ವಿತರಣೆಯನ್ನು ಪ್ರಾರಂಭಿಸಿದರು. ಆಹಾರ ಸಚಿವ ಪಿ ತಿಲೋತ್ತಮನ್ ಅಧ್ಯಕ್ಷತೆ ವಹಿಸಿದ್ದರು.

       ಕಿಟ್  ಎಂಟು ಆಹಾರ ಪದಾರ್ಥಗಳನ್ನು ಒಳಗೊಂಡಿದೆ ಮತ್ತು ಇದನ್ನು ಆಹಾರ ಭದ್ರತಾ ಭತ್ಯೆಯಾಗಿ ವಿತರಿಸಲಾಗುತ್ತದೆ. ಮೊದಲ ಹಂತದಲ್ಲಿ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೂ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೂ ಆಹಾರ ಕಿಟ್‍ಗಳನ್ನು ನೀಡಲಾಗುವುದು.

      ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಆಹಾರ ಕಿಟ್‍ನಲ್ಲಿ 2 ಕೆಜಿ ಅಕ್ಕಿ ಮತ್ತು 308.14 ರೂ.ಗಳ ಇತರ ಆಹಾರೋತ್ಪನ್ನಗಳು ಇರಲಿವೆ. ಆದರೆ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ ಏಳು ಕಿಲೋ ಆಹಾರ ಧಾನ್ಯಗಳು ಸಿಗಲಿವೆ.ಯುಪಿ ವಿಭಾಗದ ವಿದಾರ್ಥಿಗಳಿಗೆ 10 ಕೆಜಿ ಆಹಾರ ಧಾನ್ಯಗಳು ಮತ್ತು 461.90 ರೂ.ಗಳ ಕಡಲೆ, ಬಟಾಣಿ, ಬೀಜಗಳು, ತೊಗರಿ ಬೇಳೆ, ಖಾದ್ಯ ಪದಾರ್ಥಗಳು ಮತ್ತು ಮೂರು ಬಗೆಯ ಕರಿ ಪೌಡರ್ ಒಳಗೊಂಡಿರುವ ಕಿಟ್‍ಗಳನ್ನು ಸಪ್ಲೈಕೊ ತಯಾರಿಸಿ ವಿತರಿಸಲಿದೆ. 

     ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಪೆÇೀಷಕರು ಶಾಲೆಗಳ ಮೂಲಕ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ.  ಈ ಯೋಜನೆಯು ಮಧ್ಯಾಹ್ನ ಊಟ ಯೋಜನೆಯಡಿ 12324 ಶಾಲೆಗಳಲ್ಲಿ 27,27,202 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೋವಿಡ್ ಕಾರಣದಿಂದಾಗಿ ಶಾಲಾ ಮಕ್ಕಳಿಗೆ ಆಹಾರ ಭದ್ರತಾ ಕಾಯ್ದೆಯಡಿ ಮಧ್ಯಾಹ್ನದೂಟ ಶಾಲೆಗಳ ಮೂಲಕ ನೇರವಾಗಿ ನೀಡಲು ಅನನುಕೂಲವಾದ ಹಿನ್ನೆಲೆಯಲ್ಲಿ ಕಿಟ್ ನ್ನು ಭತ್ಯೆಯಾಗಿ ಮಕ್ಕಳಿಗೆ ವಿತರಿಸಲಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries