HEALTH TIPS

ವಾಟ್ಸಪ್ ಮೂಲಕ ಹಣ ರವಾನೆಗೆ ಯಾವುದೇ ರೀತಿಯ ಶುಲ್ಕವಿಲ್ಲ: ಮಾರ್ಕ್ ಜುಕರ್ ಬರ್ಗ್!

   ಕ್ಯಾಲಿಫೆÇೀರ್ನಿಯಾ: ವಾಟ್ಸಪ್ ಮೂಲಕ ಹಣ ರವಾನೆಗೆ ಯಾವುದೇ ರೀತಿಯ ಶುಲ್ಕವಿಲ್ಲ ಎಂದು ವಾಟ್ಸಪ್ ನ ಮಾಲೀಕತ್ವವಿರುವ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಹೇಳಿದ್ದಾರೆ.

      ವಾಟ್ಸಪ್ ನ ನೂತನ ಸೇವೆ ಪಾಟ್ಸಪ್ ಯುಪಿಐ ಪೇ ಸೇವೆ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜುಕರ್ ಬರ್ಗ್, ವಾಟ್ಸಪ್ ನಲ್ಲಿ ಇದೀಗ ನೀವು ಹಣವನ್ನು ಕೂಡ ವರ್ಗಾವಣೆ ಮಾಡಬಹುದು. ವಾಟ್ಸಪ್ ಪೇ ಸೇವೆ 140ಕ್ಕೂ ಹೆಚ್ಚು ಬ್ಯಾಂಕ್ ಗಳನ್ನು ಒಳಗೊಂಡಿದ್ದು, ನಿಮ್ಮ ಸ್ನೇಹಿತರಿಗೆ, ಕುಟುಂಬಸ್ಥರಿಗೆ  ಸುಲಭವಾಗಿ ವಾಟ್ಸಪ್ ಮೂಲಕ ಹಣದ ವರ್ಗಾವಣೆ ಮಾಡಬಹುದು. ಈ ಸೇವೆಗೆ ವಾಟ್ಸಪ್ ಯಾವುದೇ ರೀತಿಯ ಶುಲ್ಕ ವಿಧಿಸುತ್ತಿಲ್ಲ ಎಂದು ಹೇಳಿದ್ದಾರೆ.

      ಅಂತೆಯೇ ವಾಟ್ಸಪ್ ಪೇಮೆಂಟ್ ಸೇವೆ ಭಾರತದ 10 ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದ್ದು, ಯುಪಿಐಗೆ ಒಳಗೊಂಡಿರುವ ಚಾಲ್ತಿಯಲ್ಲಿರುವ ಡೆಬಿಟ್ ಕಾರ್ಡ್ ಅನ್ನು ವಾಟ್ಸಪ್ ಪೇಗೆ ಲಿಂಕ್ ಮಾಡುವ ಮೂಲಕ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು. ಈ ಸೇವೆ ಹೊಸ ಆವೃತ್ತಿಯ ವಾಟ್ಸಪ್ ನಲ್ಲಿ ಲಭ್ಯವಿದೆ. ಈ  ಕುರಿತಂತೆ ನಾವು ನ್ಯಾಷನಲ್ ಪೇಮೆಂಟ್ಸ್ ಕಾಪೆರ್Çೀರೇಷನ್ ಆಫ್ ಇಂಡಿಯಾ (ಎನ್ ಸಿ ಪಿ ಐ)ದೊಂದಿಗೆ ಚರ್ಚೆ ನಡೆಸಿದ್ದು, ಅನುಮೋದನೆ ಕೂಡ ಪಡೆದಿದ್ದೇವೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ.

      'ಜನರು ಹಣಕಾಸಿನ ಪರಿಕರಗಳನ್ನು ಬಳಕೆ ಮಾಡಿದಾಗ, ತಮ್ಮನ್ನು ಮತ್ತು ಇತರರನ್ನು ಆರ್ಥಿಕವಾಗಿ ಬೆಂಬಲಿಸಲು ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಅವರಿಗೆ ಹೆಚ್ಚಿನ ಅಧಿಕಾರವಿದೆ. ದೀರ್ಘಾವಧಿಯವರೆಗೆ, ಜನರಿಗೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ, ಅದು ಜನರಿಗೆ ಅವರ ಹಣದ ಮೇಲೆ  ನಿಯಂತ್ರಣವನ್ನು ನೀಡುತ್ತದೆ, ಮತ್ತು ಪಾವತಿಗಳನ್ನು ಸುಲಭಗೊಳಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮದು ಒಂದು ಸಣ್ಣ ಹೆಜ್ಜೆಯಾಗಿದ್ದು ಅದು ನಿಜವಾಗಿಯೂ ಸಹಾಯ ಮಾಡುತ್ತದೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ. 

       ನಿನ್ನೆಯಷ್ಟೇ ಎನ್ ಪಿ ಸಿ ಐ ವಾಟ್ಸಪ್ ತನ್ನ ಸೇವೆಗಳಲ್ಲಿ ಯುಪಿಐ ಪೇಮೆಂಟ್ ಅನ್ನು ವಿಸ್ತರಣೆ ಮಾಡಿಕೊಳ್ಳಬಹುದು ಎಂದು ಹೇಳಿತ್ತು. ಅಲ್ಲದೆ ಗರಿಷ್ಠ 20 ಮಿಲಿಯನ್ ಬಳಕೆದಾರರನ್ನು ಹೊಂದಲು ಓPಅI ವಾಟ್ಸಪ್ ಗೆ ಅನುಮತಿ ನೀಡಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries