ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮುಂದುವರಿಯುತ್ತಿರುವಂತೆ ಕೋವಿಡ್ ರೋಗಿಗಳಿಗೂ ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ತ್ರಿಸ್ಥರ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಮತದಾನದ ಹಿಂದಿನ ದಿನ ಮುಂಜಾನೆ 3 ರವರೆಗೆ ಕೋವಿಡ್ ದೃಢಪಟ್ಟವರಿಗೆ ಈ ಪ್ರಯೋಜನಗಳು ಲಭ್ಯವಿದೆ. ಇದರ ಬಳಿಕ ಸೋಂಕಿಗೆ ಒಳಗಾದವರು ನೇರವಾಗಿ ಬೂತ್‍ಗೆ ಹೋಗಿ ಕೊನೆಯ ಗಳಿಗೆಯಲ್ಲಿ ಮತ ಚಲಾಯಿಸಬಹುದು ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಅಂಚೆ ಮತದಾನದ ಕಾರ್ಯವಿಧಾನಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ರೋಗಿಗಳ ಮತ್ತು ಸಂಪರ್ಕತಡೆಯಲ್ಲಿರುವವರ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
ಈ ಪಟ್ಟಿಯಲ್ಲಿ ಸೋಂಕು ದೃಢಪಟ್ಟವರು ಮತ್ತು ಮತದಾನದ ಹತ್ತು ದಿನಗಳ ಮೊದಲು ಹಾಗೂ ಮರುದಿನ ಮೂರು ಗಂಟೆಯವರೆಗೆ ಸಂಪರ್ಕತಡೆಯನ್ನು ಪ್ರವೇಶಿಸುವವರು ಸೇರಿದ್ದಾರೆ. ವಿಶೇಷ ಮತಗಟ್ಟೆ ಅಧಿಕಾರಿ ಮತ್ತು ಅವರ ಸಹಾಯಕರು ಮತಪತ್ರವನ್ನು ಮನೆಗಳಿಗೆ ತಲುಪಿಸುವರು ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.
ಮೊದಲು ಅರ್ಜಿಯನ್ನು ಭರ್ತಿ ಮಾಡುವುದರ ಜೊತೆಗೆ ಅಫಿಡವಿಟ್ ಮತ್ತು ಬ್ಯಾಲೆಟ್ ಪೇಪರ್ ಲಭ್ಯವಿರುತ್ತದೆ. ಅಫಿಡವಿಟ್‍ನಲ್ಲಿ ಸಹಿ ಮಾಡಿ ಮತಗಟ್ಟೆ ಅಧಿಕಾರಿಗಳ ಮುಂದೆ ಸಲ್ಲಿಸಬೇಕು. ನಂತರ ಬ್ಯಾಲೆಟ್ ಪೇಪರ್ ಮತ್ತು ಅಫಿಡವಿಟ್ ಅನ್ನು ರಹಸ್ಯವಾಗಿ ದಾಖಲಿಸಬೇಕು. ಪ್ರತ್ಯೇಕ ಲಕೋಟೆಗಳಲ್ಲಿ ಅಂಟಿಸಿ ಎರಡನ್ನೂ ಅಧಿಕಾರಿಗೆ ಹಸ್ತಾಂತರಿಸಬೇಕು.
ಮತಪತ್ರವನ್ನು ಹಿಂದಿರುಗಿಸಿದ ರಶೀದಿಯನ್ನು ಅಧಿಕಾರಿಗಳು ನೀಡುತ್ತಾರೆ. ಮತಪತ್ರವನ್ನು ದಾಖಲಿಸಿದ ಅಧಿಕಾರಿಯ ಬಳಿ ಮತಪತ್ರ ಇಲ್ಲದಿದ್ದರೆ, ಅದನ್ನು ರಿಟನಿರ್ಂಗ್ ಅಧಿಕಾರಿಗೆ ಅಂಚೆ ಮೂಲಕ ತಲುಪಿಸಬೇಕು.
ಮತದಾನದ ಹಿಂದಿನ ದಿನ ಸಂಜೆ 6 ಗಂಟೆಯ ಮೊದಲು ಪೂರ್ಣ ಮತಪತ್ರವನ್ನು ತಲುಪಿಸಬೇಕು. ಹಿಂದಿನ ದಿನ ಮಧ್ಯಾಹ್ನ 3 ಗಂಟೆಯ ನಂತರ ಸೋಂಕು ದೃಢೀಕರಿಸಿದವರು ಮತದಾನದ ದಿನದಂದು ಸಂಜೆ 5 ರಿಂದ ಸಂಜೆ 6 ರ ನಡುವೆ ನೇರವಾಗಿ ಬೂತ್‍ನಲ್ಲಿ ಮತ ಚಲಾಯಿಸಬಹುದು. ಅಂಚೆ ಮತದಾನಕ್ಕೆ ನೇರವಾಗಿ ಅರ್ಜಿ ಸಲ್ಲಿಸುವ ಕೋವಿಡ್ ರೋಗಿಗಳು ಆರೋಗ್ಯ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.





