HEALTH TIPS

ಇಸ್ಲಾಮಿಕ್ ಕಾನೂನಿನಲ್ಲಿ ಬದಲಾವಣೆ ತಂದ UAE, ಲಿವ್ ಇನ್ ಹಾಗೂ ಸಾರಾಯಿ ಸೇವನೆಗೆ ಅನುಮತಿ

     ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶದ ಇಸ್ಲಾಮಿಕ್ ವೈಯಕ್ತಿಕ ಕಾನೂನುಗಳಲ್ಲಿ(Islamic Personal Laws) ಹಲವಾರು ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದು, ಅವಿವಾಹಿತ ದಂಪತಿಗಳು ಒಟ್ಟಿಗೆ ವಾಸಿಸಲು ಅವಕಾಶ ಮಾಡಿಕೊಟ್ಟಿದೆ. ಇದಲ್ಲದೆ, ಹೊಸ ಕಾನೂನಿಡ್ನ ಪ್ರಕಾರ, ಮದ್ಯದ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಮತ್ತು ಹಾನರ್ ಕಿಲ್ಲಿಂಗ್ ಅನ್ನು ಅಪರಾಧದ ವಿಭಾಗದಲ್ಲಿ ಇರಿಸಲಾಗಿದೆ.

      ಹೊಸ UAE ನಿರ್ಮಾಣದ ದಿಕ್ಕಿನಲ್ಲಿ ಹೆಜ್ಜೆ
     ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿನ ಈ ಬದಲಾವಣೆಯೊಂದಿಗೆ ಯುಎಇ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯನ್ನು ವಿಸ್ತರಿಸಿದೆ. ಪ್ರವಾಸಿಗರು, ವಿದೇಶಿ ಉದ್ಯಮಿಗಳು ಮತ್ತು ಕೈಗಾರಿಕೆಗಳನ್ನು ಆಕರ್ಷಿಸಲು ಯುಎಇ ಪಾಶ್ಚಿಮಾತ್ಯ ಸಂಸ್ಕೃತಿಗೆ ಸ್ಥಾನ ನೀಡಿದೆ. ಇದು ಹೊಸ ಯುಎಇ ನಿರ್ಮಾನಡೆದೆ ಇಟ್ಟ ಒಂದು ಹೆಜ್ಜೆ. ಸುಧಾರಣೆಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಮತ್ತು ಜಾಗತಿಕ ಸನ್ನಿವೇಶಕ್ಕೆ ಸೇರಲು ಯುಎಇ ತನ್ನ ಮನಸ್ಥಿತಿಯನ್ನು ಬದಲಾಯಿಸುತ್ತಿದೆ ಎಂದು ಜಗತ್ತಿಗೆ ತಿಳಿಸಿದೆ.

      ಇಸ್ರೇಲ್ ಜೊತೆಗಿನ ಒಪ್ಪಂದದ ಬಳಿಕ ಬದಲಾವಣೆ

     ಯುಎಇ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸಲು ಯುಎಸ್ ನೇತೃತ್ವದಲ್ಲಿ ನಡೆದ  ಒಪ್ಪಂದದ ನಂತರ ಈ ನಿರ್ಧಾರ ಬಂದಿದೆ. ಇದು ಯುಎಇನಲ್ಲಿ ಇಸ್ರೇಲಿ ಪ್ರವಾಸಿಗರ ಒಳಹರಿವು ಹೆಚ್ಚಿಸಲಿದೆ ಹಾಗೂ ಯುಎಇಯಲ್ಲಿ ಅವರಿಗೆ ಹೂಡಿಕೆಗೆ ದಾರಿ ತೆರೆಯಲಿದೆ. ಕಾನೂನುಗಳನ್ನು ಬದಲಾಯಿಸುವ ಕ್ರಮವು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಮಿರೇಟ್ ಆಡಳಿತಗಾರರ ಪ್ರಯತ್ನವಾಗಿಯೂ ನೋಡಲಾಗುತ್ತಿದೆ.
     ಮದ್ಯ ಸೇವಿಸಲು ಹಾಗೂ ಸಂಗ್ರಹಿಸಿಡಲು ಅನುಮತಿ
     ಹೊಸ ಕಾನೂನಿನ ಪ್ರಕಾರ, 21 ವರ್ಷ ಅಥವಾ ಮೇಲ್ಪಟ್ಟ ವ್ಯಕ್ತಿಗೆ ಮದ್ಯಪಾನ, ಮಾರಾಟ ಅಥವಾ ಮದ್ಯವನ್ನು ಹೊಂದಿದ್ದಕ್ಕಾಗಿ ದಂಡ ವಿಧಿಸಲಾಗುವುದಿಲ್ಲ. ಯುಎಇಯ ಕರಾವಳಿ ನಗರಗಳಲ್ಲಿನ ಬಿಯರ್ ಬಾರ್ ಮತ್ತು ಕ್ಲಬ್‌ಗಳಲ್ಲಿ ಮದ್ಯ ವ್ಯಾಪಕವಾಗಿ ಲಭ್ಯವಿದೆ, ಆದರೆ ಈ ಹಿಂದೆ ಜನರು ತಮ್ಮ ಮನೆಗಳಲ್ಲಿ ಮದ್ಯವನ್ನು ಖರೀದಿಸಲು, ಸಾಗಿಸಲು ಅಥವಾ ಇಡಲು ಪರವಾನಗಿ ಪಡೆಯಬೇಕಾಗುತ್ತಿತ್ತು. ಇದೀಗ ಮೊದಲು ಪರವಾನಗಿ ಪಡೆಯದ ಜನರಿಗೆ ಸಹ ಮದ್ಯಪಾನ ಮಾಡಲು ಅವಕಾಶವಿರುತ್ತದೆ.
       ಮದುವೆಯಾಗದೆಯೇ ಯುವಕ-ಯುವತಿಯರು ಲಿವ್ ಇನ್ ನಲ್ಲಿ ವಾಸಿಸಬಹುದು
      ಯುನೈಟೆಡ್ ಅರಬ್ ಎಮಿರೇಟ್ಸ್ ನ ನೂತನ ಕಾನೂನು ದಂಪತಿಗಳು ವಿವಾಹವಿಲ್ಲದೆ ಒಟ್ಟಿಗೆ ವಾಸಿಸಲು ಅನುವು ಮಾಡಿಕೊಡುತ್ತವೆ, ಇದು ಯುಎಇಯಲ್ಲಿ ಬಹಳ ಹಿಂದಿನಿಂದಲೂ ಗಂಭೀರ ಅಪರಾಧ ಎಂದು ಪರಿಗಣಿಸಲಾಗುವ ವರ್ಗವಾಗಿದೆ. ಆದರೆ, ವಿದೇಶಿಗರ ವಿಷಯದಲ್ಲಿ ಈ ಇದು ಸ್ವಲ್ಪ ಮೃದುಧೋರಣೆ ತಳೆದಿತ್ತಾದರೂ ಕೂಡ ಶಿಕ್ಷೆಯಾಗುವ ಅಪಾಯವಿತ್ತು. ಇದಲ್ಲದೆ, ಇಸ್ಲಾಮಿಕ್ ಕಾನೂನಿನಲ್ಲಿ ಆತ್ಮಹತ್ಯೆ ಪ್ರಯತ್ನವನ್ನು ಸಹ ನಿಷೇಧಿಸಲಾಗಿದೆ, ಇದನ್ನು ನಿರ್ಮೂಲನೆ ಮಾಡಲಾಗುವುದು ಎಂದೂ ಕೂಡ ಹೇಳಲಾಗಿದೆ.
      ಹಾನರ್ ಕಿಲ್ಲಿಂಗ್ ಅನ್ನು ಅಪರಾಧದ ಶ್ರೇಣಿಗೆ ಸೇರಿಸಲಾಗಿದೆ
     ಮಹಿಳೆಯರ ಹಕ್ಕುಗಳನ್ನು ಉತ್ತಮವಾಗಿ ರಕ್ಷಿಸುವ ಸಲುವಾಗಿ, ಯುಎಇ ಸರ್ಕಾರವು 'ಹಾನರ್ ಕಿಲ್ಲಿಂಗ್'ನಿಂದ ಅವರಿಗೆ ರಕ್ಷಣೆ ಒದಗಿಸಲು ರಕ್ಷಣೆಯ ತನ್ನ ನೂತನ ಕಾನೂನಿನಲ್ಲಿ ಸೂಕ್ತ ಬಳಲಾವನೆಗಳನ್ನು ಮಾಡಿದೆ. ಅದರ ಅಡಿಯಲ್ಲಿ ಗೌರವ ಹತ್ಯೆಯನ್ನು ಅಪರಾಧ ಎಂದು ವರ್ಗೀಕರಿಸಲಾಗಿದೆ. ಈ ಹಿಂದೆ, ಮನೆಯ ಗೌರವದೊಂದಿಗೆ ಮಹಿಳೆ ಆಡುತ್ತಿದ್ದಾಳೆ ಎಂದು ಸಾಬೀತುಪಡಿಸಿದರೆ ಮಾತ್ರ ಪುರುಷ ಸಂಬಂಧಿಯ ಮೇಲೆ ಹಲ್ಲೆ ನಡೆಸಿದ ನಂತರ ಪುರುಷ ಬದುಕುಳಿಯುತ್ತಿದ್ದ.
      ವರ್ಲ್ಡ್ ಎಕ್ಸ್ಪೋ ಆಥಿತ್ಯ ಬಹಿಸಲಿದೆ ಯುಎಇ
     ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವ ಎಕ್ಸ್‌ಪೋವನ್ನು ಆಯೋಜಿಸಲಿರುವ ಸಂದರ್ಭದಲ್ಲಿ ಯುಎಇ ತನ್ನ ಕಾನೂನಿನಲ್ಲಿ ಈ ಬದಲಾವಣೆಗಳನ್ನು ತಂದಿರುವುದು ಇಲ್ಲಿ ಗಮನಾರ್ಹ. ಈ ಘಟನೆಯು ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸುವುದಲ್ಲದೆ, 25 ದಶಲಕ್ಷಕ್ಕೂ ಹೆಚ್ಚು ಜನರ ಸಂಚಾರ ಕೂಡ ಸುನಿಶ್ಚಿತಗೊಳಿಸಲಿದೆ.ಕರೋನಾ ವೈರಸ್‌ನಿಂದ ಉಂಟಾದ ಹಾನಿಯ ನಂತರ ಪ್ರವಾಸೋದ್ಯಮವನ್ನು ಪ್ರೋಸ್ತಾಹಿಸಲೂ ಕೂಡ ಯುಎಇ ಈ ಕ್ರಮಕೈಗೊಂಡಿದೆ ಎಂದರೆ ತಪ್ಪಾಗಲಾರದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries