ಕೊಚ್ಚಿ: ಕೆಎಸ್‍ಆರ್‍ಟಿಸಿ ನೌಕರರು ಇನ್ನು ರಾತ್ರಿ ವೇಳೆ ಎಸಿ ಸ್ಲೀಪರ್ ಬಸ್‍ಗಳಲ್ಲಿ ಮಲಗಲು ಇಲಾಖೆ ಅನುಮತಿ ನೀಡಿದೆ. ರಾತ್ರಿ ವೇಳೆಯಲ್ಲಿ ಕರ್ತವ್ಯದಲ್ಲಿರುವ ಸ್ಟೇ ಬಸ್‍ನ ಚಾಲಕರು ಮತ್ತು ಕಂಡಕ್ಟರ್‍ಗಳು ಬಸ್‍ನಲ್ಲೇ ಮಲಗಿ ವಿಶ್ರಾಂತಿಗೈಯ್ಯಲು ಈ ಮೂಲಕ ಮಹತ್ತರ ಆದೇಶ ನೀಡಲಾಗಿದೆ. ಕೆಎಸ್‍ಆರ್‍ಟಿಸಿ ಈ ವಿಶ್ರಾಂತಿ ಸೌಲಭ್ಯವನ್ನು ನೌಕರರಿಗೆ ಉಚಿತವಾಗಿ ವ್ಯವಸ್ಥೆಗೊಳಿಸಿದೆ.
ಸಂಚಾರಕ್ಕೆ ಅಯೋಗ್ಯವಾಗಿ ಹಿಂತೆಗೆಯಬೇಕಾಗುವ ಬಸ್ ಗಳನ್ನು ಹೊಸ ರೀತಿಯಲ್ಲಿ ವಿನ್ಯಸಿಸಿ ನೂತನ ಯೋಜನೆಗೆ ಬಳಸಲಾಗುತ್ತದೆ. ಮಾವೇಲಿಕ್ಕರ ಡಿಪೋದಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಾಗಾರದಲ್ಲಿ ಇಂತಹ ಬಸ್ ವೊಂದರ ಮೊದಲ ಪ್ರಾಯೋಗಿಕ ವಿನ್ಯಾಸ ರಚನೆ ನಡೆಯಿತು. ಕರೋನಾ ವೈರಸ್ ಹರಡುವ ಸಮಯದಲ್ಲಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಕರೆತರಲು ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಚಾಲಕರ ವಿಶ್ರಾಂತಿಗೆ ಮತ್ತು ಮಲಗಲು ಈ ಬಸ್ ಮೊದಲು ಪ್ರಾಯೋಗಿಕವಾಗಿ ಸಂಚಾರ ನಡೆಸಿತು. ಸ್ಲೀಪರ್ ಬಸ್ ಅನ್ನು ಮೊದಲು ಪೆರುಂಬವೂರ್ ಡಿಪೆÇೀದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಈ ಮಾದರಿಯನ್ನು ಕೊಚ್ಚಿಯಲ್ಲೂ ಅನುಸರಿಸಲಾಯಿತು.
ಬಸ್‍ನಲ್ಲಿ ಎರಡು ಮಹಡಿಗಳಲ್ಲಿ 16 ಜನರಿಗೆ ಅವಕಾಶ ಕಲ್ಪಿಸಬಹುದು. ಬಸ್‍ನಲ್ಲಿ ಎಸಿ, ನಾಲ್ಕು ಆಸನಗಳ ಡೈನಿಂಗ್ ಟೇಬಲ್, ವಾಶ್ ಬೇಸಿನ್, ಫ್ಯಾನ್ ಮತ್ತು ಲೈಟ್ ಇದೆ. ಇದು 16 ಜನರಿಗೆ ಲಾಕರ್ ಅನ್ನು ಸಹ ಹೊಂದಿದೆ. ಎರಡು ತಿಂಗಳ ಹಿಂದೆ ಕೆಎಸ್‍ಆರ್‍ಟಿಸಿ ಮೂನ್ನಾರ್‍ಗೆ ಆಗಮಿಸುವ ಪ್ರವಾಸಿಗರಿಗೆ ವಸತಿಗಾಗಿ ಎರಡು ಸ್ಲೀಪರ್ ಬಸ್‍ಗಳನ್ನು ವ್ಯವಸ್ಥೆಗೊಳಿಸಿತ್ತು.
16 ಹಾಸಿಗೆಗಳ ಎರಡು ಎಸಿ ಬಸ್‍ಗಳನ್ನು ಒದಗಿಸಲಾಗಿದೆ. ಬಸ್‍ನಲ್ಲಿ ಉಳಿದುಕೊಂಡಿರುವವರು ಡಿಪೆÇೀದ ಶೌಚಾಲಯಗಳನ್ನು ಬಳಸಬಹುದು. ಒಂದು ಹಾಸಿಗೆಗೆ ಸಾಮಾನ್ಯ ಜನರಿಗೆ ದಿನಕ್ಕೆ 100 ರೂ.ನಿಗದಿಪಡಿಸಲಾಗುತ್ತದೆ. ಬಸ್‍ನಲ್ಲಿರುವ ಎಲ್ಲಾ ಆಸನಗಳನ್ನು ಒಬ್ಬರು ಅಥವಾ ಇಬ್ಬರಿಗೆ ಕಾಯ್ದಿರಿಸಬಹುದು. ಇದಕ್ಕಾಗಿ 1,600 ರೂ.ಪಾವತಿಸಬೇಕಾಗುತ್ತದೆ.





