ತಿರುವನಂತಪುರ: ರಾಜ್ಯದಲ್ಲಿ ಇಂದು 4969 ಜನರಿಗೆ ಕೋವಿಡ್ ಬಾಧಿಸಿದೆ. ಕೋಝಿಕ್ಕೋಡ್ 585, ಮಲಪ್ಪುರಂ 515, ಕೊಟ್ಟಾಯಂ 505, ಎರ್ನಾಕುಳಂ 481, ತ್ರಿಶೂರ್ 457, ಪತ್ತನಂತಿಟ್ಟು 432, ಕೊಲ್ಲಂ 346, ಆಲಪ್ಪುಳ 330, ಪಾಲಕ್ಕಾಡ್ 306, ತಿರುವನಂತಪುರ 271, ಕಣ್ಣೂರು 266, ಇಡುಕ್ಕಿ 243, ವಯನಾಡ್ 140, ಕಾಸರಗೋಡು 92 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 60,851 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 8.17.ರಷ್ಟಿದೆ. ನಿಯಮಿತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎ ಎಂ ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 71,79,051 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರದಲ್ಲಿ ಚಿಕಿತ್ಸೆಯಲ್ಲಿದ್ದ ನಾಗರ್ ಕೋಯಿಲ್‍ನ ಕ್ರಿಸ್ಟೀನ್ ಚೆಲ್ಲಂ (62), ಕೊಲ್ಲಂ ಚತ್ತನ್ನೂರುನ ವತ್ಸಲನ್ (75), ಮುಖಾತ್ತಲದ ನಾಣು (100), ನಿಲಮೆಲ್ ನ ಮಾಧವನ್ ಉನ್ನಿತಾನ್ (75),ಪತ್ತನಂತಿಟ್ಟು ಮುಡಿಯೂರ್ಕೋಣಂನ ರಾಜಶೇಖರನ್ ಪಿಳ್ಳೈ (63), ಪೆರಿಂಗಾಡ್ ನ ಕುಂಞÂ ಮೋಳ್(75), ಎಡಕ್ಕುಳಂ ನ ಗೋಪಾಲಕೃಷ್ಣ ನಾಯರ್(82), ಸೀತಾತ್ತೋಡ್ ನ ವಚನಪಾಲನ್ (89), ಮಲ್ಲಪ್ಪಳ್ಳಿಯ ಎಂ.ಕೆ. ಚೆರಿಯಾನ್ (71), ನರಕತ್ತಾನಿ ಮೂಲದ ಕೆ.ಎನ್.ಯೋಹನನ್(67), ಆಲಪ್ಪುಳ ಸಕಾರಿಯಾ ವಾರ್ಡ್ ನ ಬೀಮಾ (59), ಮಾಯಿತ್ತರದ ಸುಕುಮಾರನ್ (68), ಪುನ್ನಪ್ರಾದ ವಲ್ಸಲಾ (66), ಪುÀÅನ್ನಪ್ರದ ತುಳಸಿ (60), ಕೋಟ್ಟಯಂ ವೈಕ್ಕಂ ನ ಮುರಳಿ (54), ಇಡುಕ್ಕಿ ಪಶುಪಾರದ ಸುಕುಮಾರನ್ (62), ಎರ್ನಾಕುಳಂ ಕೊಡುವಳ್ಳಿಕಾವ್ ನ ಭಾಸ್ಕರನ್ (82), ಎರ್ನಾಕುಲಂ ಕಾಲಡಿಯ ಮೊಹಮ್ಮದ್ (78),ಮಲಪ್ಪುರಂ ಆಂತಿಯೂರ್‍ಕುನ್ನಿನ ಸಫೀರಾ (60), ಪರಪ್ಪನಂಗಡಿಯ ಚೆರಿಯಾ ಬೀವಿ ಪನಾಯತಿಲ್ (74), ಪೆರೂರ್ ನ ಚಾರುಕುಟ್ಟಿ(82), ಕೋಝಿಕ್ಕೋಡ್ ತಾಮರಶ್ಚೇರಿಯ ಮೊಯ್ದೀನ್ ಕೋಯ(65), ಕಲ್ಲಾಯಿಯ ಅಲಿಮೇಲ್(65), ಒರಾವಿಲ್ ಮೂಲದ ಎಲ್.ಕೆ.ಮಾಧವನ್(66), ಕಿನಲೂರ್ ನ ಶ್ರೀಧರನ್(74), ಕುತ್ತಿರಪ್ಪಟ್ಟದ ವಿ.ಕೃಷ್ಣನ್ ಕುಟ್ಟಿ(87), ಕಣ್ಣೂರು ಒಳವಿಲ್ ನ ಚಂದ್ರನ್(67), ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಈ ಮೂಲಕ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ 2,734 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ನಿರ್ಣಯ ಮಾಡಿದವರಲ್ಲಿ 99 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4282 ಜನರಿಗೆ ಸೋಂಕು ತಗುಲಿತು. 541 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 540, ಮಲಪ್ಪುರಂ 467, ಕೊಟ್ಟಾಯಂ 474, ಎರ್ನಾಕುಳಂ 357, ತ್ರಿಶೂರ್ 446, ಪತ್ತನಂತಿಟ್ಟು 356, ಕೊಲ್ಲಂ 339, ಆಲಪ್ಪುಳ 304, ಪಾಲಕ್ಕಾಡ್ 137, ತಿರುವನಂತಪುರ 192, ಕಣ್ಣೂರು 222, ಇಡುಕ್ಕಿ 230,ವಯನಾಡ್ 135, ಕಾಸರಗೋಡು 83 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
47 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 10, ಎರ್ನಾಕುಳಂ 9, ತಿರುವನಂತಪುರ, ಪತ್ತನಂತಿಟ್ಟು, ಕೋಝಿಕ್ಕೋಡ್ 5, ಮಲಪ್ಪುರಂ 4, ಕೊಲ್ಲಂ, ತ್ರಿಶೂರ್ 2, ಪಾಲಕ್ಕಾಡ್ 2, ಇಡುಕ್ಕಿ, ಕೊಟ್ಟಾಯಂ ಮತ್ತು ಕಾಸರಗೋಡು 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4970 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 265, ಕೊಲ್ಲಂ 418, ಪತ್ತನಂತಿಟ್ಟು 184, ಆಲಪ್ಪುಳ 484, ಕೊಟ್ಟಾಯಂ 576, ಇಡುಕಿ 98, ಎರ್ನಾಕುಳಂ 565, ತ್ರಿಶೂರ್ 440, ಪಾಲಕ್ಕಾಡ್ 277, ಮಲಪ್ಪುರಂ 520, ಕೋಝಿಕ್ಕೋಡ್ 780, ವಯನಾಡ್ 209, ಕಣ್ಣೂರು 101, ಕಾಸರಗೋಡು 53 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 58,155 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 6,27,364 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,96,747 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,83,389 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 13,358 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1563 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 7 ಹೊಸ ಹಾಟ್‍ಸ್ಪಾಟ್‍ಗಳಿವೆ. ನರಣ್‍ಮೂಳಿ (ಕಂಟೋನ್ಮೆಂಟ್ ವಲಯ ವಾರ್ಡ್‍ಗಳು 3, 8), ವಡಸೆರಿಕ್ಕರ (ಸಬ್ ವಾರ್ಡ್ 1), ಎರಾತು (ಸಬ್ ವಾರ್ಡ್ 13, 15), ಕವಿಯೂರ್ (ಸಬ್ ವಾರ್ಡ್ 8), ಕಲಂಜೂರ್ (ಸಬ್ ವಾರ್ಡ್ 15), ಪಂದಲಂ ತೆಕ್ಕೇಕರ (ಸಬ್ ವಾರ್ಡ್ 2),ಇಡುಕಿ ಜಿಲ್ಲೆಯ ವಂಡಿಪೇರಿಯಾರ್ (22) ಎಂಬವುಗಳು ಹೊಸ ಹಾಟ್‍ಸ್ಪಾಟ್ ಗಳಾಗಿವೆ. 4 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 453 ಹಾಟ್‍ಸ್ಪಾಟ್‍ಗಳಿವೆ.





