ತಿರುವನಂತಪುರ: ಕೋವಿಡ್ ಲಸಿಕೆ ನೋಂದಣಿ ಅಂತಿಮ ಹಂತದಲ್ಲಿದೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ. ಸರ್ಕಾರಿ ವಲಯದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರ ನೋಂದಣಿ ಪೂರ್ಣಗೊಂಡ ಬಳಿಕ ಲಸಿಕೆ ವಿತರಿಸಲು ರಾಜ್ಯ ನೋಡಲ್ ಅಧಿಕಾರಿ ಮತ್ತು ರಾಜ್ಯ ನಿರ್ವಾಹಕರನ್ನು ನಿಯೋಜಿಸಲಾಗಿದೆ.
ಮೊದಲ ಹಂತದಲ್ಲಿ ಲಸಿಕೆ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದರು.





