ಕೊಚ್ಚಿ: ಮುಖ್ಯಮಂತ್ರಿಯ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ ರವೀಂದ್ರನ್ ಅವರು ಕೊನೆಗೂ ಜಾರಿ ನಿರ್ದೇಶನಾಲಯದ ಮುಂದೆ ಇಂದು ಹಾಜರಾದರು. ಇ.ಡಿ ಕಳುಹಿಸಿದ ನಾಲ್ಕನೇ ನೋಟಿಸಿನ ಬಳಿಕ ರವೀಂದ್ರನ್ ವಿಚಾರಣೆಗೆ ಹಾಜರಾದರು.
ಈ ಹಿಂದೆ ಮೂರು ಬಾರಿ ನೋಟಿಸ್ ನೀಡಿದ್ದರೂ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ರವೀಂದ್ರನ್ ಪ್ರಶ್ನಿಸುವುದರಿಂದ ತಪ್ಪಿಸಿಕೊಂಡಿದ್ದರು. ಮೊದಲ ನೀಟೀಸು ನೀಡಿದ್ದಾಗ ಕೋವಿಡ್ ಬಾಧಿಸಿದ್ದ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಬಳಿಕ ಎಡರಡನೇ ಬಾರಿ ಸೋಂಕಿನ ನಂತರದ ಆರೋಗ್ಯ ಸಮಸ್ಯೆಗಳಿಗಾಗಿ ಅವರನ್ನು ಎರಡು ಬಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದರಿಂದ ಅವರನ್ನು ಪ್ರಶ್ನಿಸಲಾಗಿಲ್ಲ.
ಈ ಹಿಂದೆ ಸಿ.ಎಂ ರವೀಂದ್ರನ್ ಅವರು ಜಾರಿ ನಿರ್ದೇಶನಾಲಯದ ನೋಟಿಸ್ ನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾದರು. ಕೊಚ್ಚಿಯಲ್ಲಿ ವಿಚಾರಣೆಯನ್ನು ತಡೆಯಲು ಅರ್ಜಿದಾರರು ಸಮನ್ಸ್ ಕೋರಿದ್ದರು.
ಈ ಪ್ರಕರಣದಲ್ಲಿ ತಾನು ಕೇವಲ ಸಾಕ್ಷಿಯಾಗಿದ್ದೇನೆ ಮತ್ತು ಆರೋಪಿಯಲ್ಲ ಎಂದು ರವೀಂದ್ರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.





