ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಪಕ್ಷವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ದೌರ್ಬಲ್ಯಗಳನ್ನು ಹೊಂದಿದೆ, ಜೊತೆಗೆ ರಾಷ್ಟ್ರಮಟ್ಟದಲ್ಲಿ ನೇತೃತ್ವದ ಕೊರತೆ ಇದೆ ಎಂದಿರುವರು. ಒಟ್ಟು ಸ್ಪಷ್ಟ ನಾಯಕತ್ವದ ಕೊರತೆ ಪ್ರಮುಖ ಕಾರಣ ಎಂದು ಉಣ್ಣಿತ್ತಾನ್ ಹೇಳಿದರು.
ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಗೆ ಉಂಟಾಗಿರುವ ಆಘಾತ ಗಂಭೀರ ಸ್ವರೂಪದ್ದು. ಇದನ್ನು ಕಾಂಗ್ರೆಸ್ಸ್ ನೇತಾರರು ಅರ್ಥೈಸಬೇಕು.ಇಲ್ಲದಿದ್ದರೆ ಇನ್ನಷ್ಟು ಅವಘಡಗಳು ಉಂಟಾಗುವುದು. ಪಕ್ಷದಲ್ಲಿ ಇದೀಗ ಬಾಲಬಿಚ್ಚುವವರೆಲ್ಲ ಮುಖಂಡರಾಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಒಂದು ವಿಷಯ ಹೇಳುತ್ತಾರೆ. ಯುಡಿಎಫ್ ಕನ್ವೀನರ್ ಬೇರೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ಸ್ ನೇತೃತ್ವ ಮತ್ತು ಜನರೊಂದಿಗಿನ ಸಂಬಂಧ ಕಡಿತಗೊಳ್ಳುತ್ತಿದೆ ಎಂದು ಉನ್ನಿಣ್ಣಾನ್ ವಿಮರ್ಶೆ ನಡೆಸಿದರು.
ಕಾಂಗ್ರೆಸ್ ನ್ನು ದುರಸ್ಥಿಗೊಳಿಸಲು ಇನ್ನು ಭಾರೀ ಶ್ರಮಿಸಬೇಕಾಗಿದೆ. ಯುಡಿಎಫ್ ಅಂತಹ ಅನುಕೂಲಕರ ವಾತಾವರಣವನ್ನು ಹೊಂದಿಲ್ಲ, ಮತ್ತು ವಿಫಲವಾಗಿದೆ. ಅದನ್ನು ತೊಡೆದುಹಾಕುವುದು ಮಾತ್ರ ಈ ಸಮಸ್ಯೆಗೆ ಪರಿಹಾರ ಎಂದು ಉಣ್ಣಿತ್ತಾನ್ ಗಮನಸೆಳೆದಿರುವರು.





