ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳೀ ನೆಲ್ಲಿಕ್ಕಾಡು ಎಂಬಲ್ಲಿ ಕಾಡುಹಂದಿ ತಿವಿದು ಕೂಲಿ ಕಾಮರ್ನಿಕನೋರ್ವ ದಾರುಣನಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಪುದುಕೋಳಿ ನಿವಾಸಿ ಐತ್ತಪ್ಪ ನಾಯ್ಕ(46) ಮೃತ ದುರ್ದೈವಿ. ಬುಧವಾರ ಅಪರಾಹ್ನ ಜೊತೆಗಾರರೊಂದಿಗೆ ಮನೆ ಪರಿಸರದ ಕಾಡಿಗೆ ಕೆಲಸದ ಭಾಗವಾಗಿ ತೆರಳಿದ್ದಾಗ ಹಠಾತ್ ಕಾಡುಹಂದಿ ದಾಳಿ ನಡೆಸಿದ್ದು ತೀವ್ರವಾಗಿ ಗಾಯಗೊಂಡರು. ಬಳಿಕ ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.





