HEALTH TIPS

ಕುಂಬಳೆಯ ಕರಾವಳಿ ತಟ ರಕ್ಷಣಾ ಪಡೆಯ ಪೋಲೀಸರ ಅಪಹರಣ-ಮಂಗಳೂರಲ್ಲಿ ಪತ್ತೆ!

              ಮಂಜೇಶ್ವರ: ಕುಂಬಳೆ ಶಿರಿಯದ ಕರಾವಳಿ ತಟ ರಕ್ಷಣಾಪಡೆಯ  ಇಬ್ಬರು ಪೆÇಲೀಸರನ್ನು ಗುಂಪೆÇಂದು ಅಪಹರಿಸಿದ ಘಟನೆ ಮಂಜೇಶ್ವರ ಕಿರುಬಂದರು ಸಮೀಪ ಸೋಮವಾರ ನಡೆದಿದ್ದು ಆತಂಕಕ್ಕೆ ಕಾರಣವಾಯಿತು.

              ಅಪಹರಣಕ್ಕೊಳಗಾದ ಪೋಲೀಸರನ್ನು ಬಳಿಕ ಮಂಗಳೂರು ಬಂದರಿನಲ್ಲಿ ಪತ್ತೆಹಚ್ಚಲಾಯಿತು. 

       ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕುಂಬಳೆ ಸಮೀಪದ ಶಿರಿಯಾ ಕರಾವಳಿ ತಟ ರಕ್ಷಣಾ ಪಡೆದ ಎಸ್‍ಐ. ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ಪೆÇಲೀಸ್ ತಂಡ ಮಂಜೇಶ್ವರ ಕಿರು ಬಂದರು ಸಮೀಪ ಸಮುದ್ರದಲ್ಲಿ 12 ಜನರಿದ್ದ ಕರ್ನಾಟಕ ದೋಣಿ ಗಮನಿಸಿ ಬಳಿಕ  ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿತು. ದಾಖಲೆಗಳಲ್ಲಿ ಕೆಲವು ಅನುಮಾನಗಳಿಂದಾಗಿ ದೋಣಿಯನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಯಿತು. ನಾಗರಿಕ ಪೆÇಲೀಸ್ ಅಧಿಕಾರಿಗಳಾದ ರಘು ಮತ್ತು ಸುಧೀಶ್ ಅವರನ್ನು ಶಿರಿಯದ ಕರಾವಳಿ ನಿಲ್ದಾಣಕ್ಕೆ ಮಂಜೇಶ್ವರದಿಂದ ಕರೆದೊಯ್ಯುವಂತೆ ದೋಣಿ ಚಾಲಕನಿಗೆ ಸೂಚಿಸಿದ್ದು ಎಸ್‍ಐ ಮತ್ತು ಅವರ ತಂಡ ದೋಣಿಯಲ್ಲಿ ತೆರಳಿದ್ದರು. ದೋಣಿ ಮಂಜೇಶ್ವರ ಬಂದರಿನಿಂದ ಪ್ರಯಾಣ ಆರಭೀಸಿದ್ದರೂ ಶಿರಿಯ ತಲಪಿರಲಿಲ್ಲ. ಬಳಿಕ ಎಸ್‍ಐ ಪೋಲೀಸರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ದೋಣಿ ಶಿರಿಯದತ್ತ ಸಾಗದೆ ಮಂಗಳೂರಿನತ್ತ ವೇಗವಾಗಿ ಸಂಚರಿಸುತ್ತಿದೆ ಎಂದು ಮಾಹಿತಿ ನೀಡಲಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸರು ಕಾಸರಗೋಡು ಪೋಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೂಡಲೇ ಮಂಗಳೂರು ಪೋಲೀಸರನ್ನು ಸಂಪರ್ಕಿಸಿದರು. ಒಂದು ಗಂಟೆಯ ನಂತರ, ದೋಣಿ ಮಂಗಳೂರಿನ ಬಂದರನ್ನು ತಲುಪಿರುವುದು ದೃಢಪಡಿಸಲಾಯಿತು. ಪೆÇಲೀಸರು ಸುರಕ್ಷಿತರಾಗಿದ್ದಾರೆಂದು ತಿಳಿದು ಬಂದಿದ್ದು ಕರಾವಳಿ ಪೋಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

        ಬಳಿಕ ಜಿಲ್ಲಾ ಪೋಲೀಸರ ನಿರ್ದೇಶನದಂತೆ ಕರಾವಳಿ ತಟ ರಕ್ಷಣಾ ಪಡೆಯ ಅಧಿಕೃತರು ಮಂಗಳೂರಿಗೆ ತೆರಳಿ ಪೋಲೀಸರನ್ನು ಕರೆತಂದರು. ಜೊತೆಗೆ ಕಂಡರೆ ಪತ್ತೆಹಚ್ಚಬಹುದಾದ 12 ಮಂದಿಯ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಅಪಹರಣಕಾರರು ಪೋಲೀಸರನ್ನು ಯಾಕಾಗಿ ಅಪಹರಿಸಿದರು ಎಂಬ ಬಗ್ಗೆ ಸ್ಪಷ್ಟವಾಗಿ ಉತ್ತರಿಸುತ್ತಿಲ್ಲ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries