ಕೊಚ್ಚಿ: ಯುವ ಪ್ರತಿಭಾವಂತ ನಾಯಕರನ್ನು ತಯಾರಿಗೊಳಿಸಲು ಮತ್ತು ರಚನಾತ್ಮಕ, ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮಿಷನ್ ಬೆಟರ್ ಟುಮಾರೊ (ಎಂಬಿಟಿ) ಸಮುದಾಯ ಸಂಘಟನೆಯ ನೇತೃತ್ವದಲ್ಲಿ ವಾರದ ಚರ್ಚಾ ಕಾರ್ಯಕ್ರಮದ ಮೂವತ್ತೇಳನೇ ಸರಣಿ ಇಂದು ಸಂಜೆ ಪ್ರಸಾರವಾಗಲಿದ್ದು ವಿಶ್ವ ತುದಿಗಾಲಲ್ಲಿ ಕಾಯುತ್ತಿದೆ.ಐಪಿಎಸ್ ಅಧಿಕಾರಿ, ಕೇರಳಿಗರಾದ ವಿ. ವಿಜಯನ್ ಎಂಬಿಟಿಯ ಸಲಹೆಗಾರರಾಗಿದ್ದಾರೆ.
ಪೋಸ್-ಪೋಸ್ (ಸಕಾರಾತ್ಮಕತೆ ಮತ್ತು ಸಾಧ್ಯತೆ) ಎಂಬ ಸರಣಿಯ ಶುಕ್ರವಾರ ಟಾಕ್ ಎಂಬಿಟಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಸರಣಿಯ ಉದ್ದೇಶವು ಜನರನ್ನು ಸಕಾರಾತ್ಮಕವಾಗಿ ಎದುರಿಸಲು ಪ್ರೇರೇಪಿಸುವುದು ಮತ್ತು ಭರವಸೆಯನ್ನು ಸೃಷ್ಟಿಸಿಬಿಡುವುದಾಗಿದೆ. ಇದನ್ನು ಸಮುದಾಯದ ಪ್ರಖ್ಯಾತ ವ್ಯಕ್ತಿಗಳು ನಡೆಸುತ್ತಾರೆ.
ಇಂದಿನ ಕಾರ್ಯಕ್ರಮದಲ್ಲಿ ಕೇರಳದ ಮುಖ್ಯ ಚುನಾವಣಾ ಆಯುಕ್ತ ಟೀಕರಾಮ್ ಮೀನಾ ಮತ್ತು ಐಎಇಸಾಫ್ ಬ್ಯಾಂಕ್ ಬ್ಯಾಂಕ್ ಸಂಸ್ಥಾಪಕ ಕೆ.ಎಸ್. ಪೌಲ್ ಥಾಮಸ್ ಭಾಗವಹಿಸಲಿದ್ದಾರೆ. "ಮೌಲ್ಯಗಳೊಂದಿಗೆ ಅಭಿವೃದ್ದಿ" ಎಂಬುದು ಇಂದಿನ ಚರ್ಚೆಯ ವಿಷಯವಾಗಿದೆ. ಇಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ಬಿತ್ತರಗೊಳ್ಳಲಿದೆ. ಪೆÇೀಸ್-ಪೆÇೀಸ್‍ನ 37 ನೇ ಸಂಚಿಕೆ ಕೂಡಾ ಆಗಿದೆ.
ಪೋಸ್-ಪೋಸ್ ಪ್ರಾರಂಭವಾದಾಗಿನಿಂದ, 75 ಕ್ಕೂ ಹೆಚ್ಚು ತಜ್ಞರು ವಿಶ್ವದಾದ್ಯಂತ ಜನರೊಂದಿಗೆ ಮಾತನಾಡಿದ್ದಾರೆ. ಈ ರೀತಿಯ ಮೊದಲ ಆನ್‍ಲೈನ್ ಟಾಕ್ ಸರಣಿಯು ಎಂಬಿಟಿಯ ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ಗಳ ಮೂಲಕ ವಾರಕ್ಕೆ ಸರಾಸರಿ ಮೂರು ಮಿಲಿಯನ್ ಲೈವ್ ವೀಕ್ಷಕರನ್ನು ತಲುಪುತ್ತದೆ.
ನಟ ಮೋಹನ್ ಲಾಲ್, ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ, ಮಾಜಿ ಇನ್ಫೋಸಿಸ್ ಸಿಇಒ ಎಸ್.ಡಿ. ಶಿಬುಲಾಲ್ ಸಹಿತ ಅನೇಕ ಹಿರಿಯ ರಾಜತಾಂತ್ರಿಕರು, ಐಎಎಸ್-ಐಪಿಎಸ್ ಅಧಿಕಾರಿಗಳು, ಬರಹಗಾರರು, ಕ್ರೀಡಾಪಟುಗಳು ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು. ಯುನಿಸೆಫ್ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕಾರ್ಯಕ್ರಮ ವೀಕ್ಷಿಸಲು:
ಝೂಂ: https://us02web.zoom.us/j/88917475443?pwd=TXg3SnZMZGhOdGhDaGRlNGVud2xpUT09
ಮೀಟಿಂಗ್ ಐಡಿ:889 1747 5443
ಪಾಸ್ ಕೋಡ್:123123
ಪೇಸ್ hಣಣಠಿs:ಬುಕ್ ಲಿಂಕ್: http://facebook.com/mbtunited
ಇಂಸ್ಟಾಗ್ರಾಂ:http://instagram.com/mbtunited
ಯೂಟ್ಯೂಬ್ ಲಿಂಕ್: http://youtube.com/mbtunited






