ತಿರುವನಂತಪುರ: ಕೇರಳದ 14 ನೇ ವಿಧಾನಸಭೆಯ ಕೊನೆಯ ಅಧಿವೇಶನ ಜನವರಿ 8 ರಿಂದ ಪ್ರಾರಂಭವಾಗಲಿದೆ. ವಿಧಾನಸಭೆಯು ರಾಜ್ಯಪಾಲರ ಭಾಷಣದೊಂದಿಗೆ ಆರಂಭಗೊಳ್ಳುತ್ತದೆ. ರಾಜ್ಯ ಬಜೆಟ್ ನ್ನು ಜ.15 ರಂದು ಬೆಳಿಗ್ಗೆ 9 ಗಂಟೆಗೆ ಹಣಕಾಸು ಸಚಿವ ಥಾಮಸ್ ಐಸಾಕ್ ಮಂಡಿಸುವರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಿನ ಸರ್ಕಾರದ ಕೊನೆಯ ಅಧಿವೇಶನವಾಗಿರುವುದರಿಂದ ಈ ಅಧಿವೇಶನ ಪ್ರಮುಖವಾದುದಾಗಿದೆ. ಚಿನ್ನ ಕಳ್ಳ ಸಾಗಣೆ, ಸಿಎಜಿ ವರದಿ ವಿವಾದ, ಸ್ಪೀಕರ್ ವಿರುದ್ಧದ ಆರೋಪ ಇತ್ಯಾದಿಗಳನ್ನು ಪ್ರತಿಪಕ್ಷಗಳು ಸದನದಲ್ಲಿ ಚರ್ಚಿಸಲಿವೆ.


