ಕಾಸರಗೋಡು: ವಿವಾದಾತ್ಮಕ ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಜೈನಲ್ ಅಬಿದ್ ಗುರುವಾರ ಜಿಲ್ಲಾ ಪೋಲೀಸ್ ಕಚೇರಿಯಲ್ಲಿ ಕೊನೆಗೂ ಶರಣಾದನು.
ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿಯ ಜನರಲ್ ಮ್ಯಾನೇಜರ್ ಜೈನುಲ್ ಅಬಿದ್ ಕಾಸರಗೋಡು ಎಸ್‍ಪಿ ಕಚೇರಿಯಲ್ಲಿ ಶರಣಾಗಿದ್ದು ಕಳೆದ ಒಂದು ತಿಂಗಳುಗಳಿಗಿಂತಲೂ ಹೆಚ್ಚು ಕಾಲದಿಂದ ತಲೆಮರೆಸಿಕೊಂಡಿದ್ದನು.
ಅಬಿದ್ ಫ್ಯಾಶನ್ ಗೋಲ್ಡ್ ನ ಎಲ್ಲಾ ಮೂರು ಶಾಖೆಗಳ ವ್ಯವಸ್ಥಾಪಕನಾಗಿದ್ದನು.ಈತ ಈ ಹಿಂದೆ ಜಾಮೀನು ಕೋರಿ ಹೈಕೋರ್ಟ್ ಸಂಪರ್ಕಿಸಿದ್ದನು. ಆತನನ್ನು ವಶಕ್ಕೆ ತೆಗೆದುಕೊಂಡ ತನಿಖಾಧಿಕಾರಿಗಳು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು. ಪೆÇಲೀಸರು ಜೈನುಲ್ ಅಬಿದ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಎಲ್ಲಾ ಹೂಡಿಕೆ ವಂಚನೆಗಳಿಗೆ ಪೂಕೋಯಾ ತಂಙಳ್ ಕಾರಣ ಎಂದು ಅಬಿದ್ ಪೆÇಲೀಸರಿಗೆ ತಿಳಿಸಿದ್ದಾನೆ. ನಿನ್ನೆ ಜಿಲ್ಲಾ ಮೇಜಿಸ್ಟ್ರೇಟ್ ರಜೆಯಲ್ಲಿದ್ದುದರಿಂದ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಪೋಲೀಸರು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಕೇಳುವರೆಂದು ತಿಳಿದುಬಂದಿದೆ.


