ನವದೆಹಲಿ: ಭಾರತದಲ್ಲಿ ಶೀಘ್ರ ಪಬ್‌ಜಿ ಮೊಬೈಲ್ ಗೇಮ್ ಶೀಘ್ರ ಪುನರಾರಂಭವಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಅನುಮತಿ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಪಬ್‌ಜಿ ಮೊಬೈಲ್ ಪುನರಾರಂಭಿಸುವ ಪಬ್‌ಜಿ ಮೊಬೈಲ್ ಇಂಡಿಯಾ ಪ್ರಯತ್ನ ಸಧ್ಯಕ್ಕೆ ವಿಫಲವಾಗಿದೆ.ಅಧಿಕಾರಿಗಳು ಭಾರತದೊಂದಿಗೆ ಸಭೆ ನಡೆಸಲು ಪ್ರಯತ್ನಿಸುತ್ತಿದ್ದರೂ ಕೂಡ ಸಾಧ್ಯವಾಗುತ್ತಿಲ್ಲ. ಭಾರತದ ಸರ್ಕಾರ ಅನುಮತಿ ನೀಡುವವರೆಗೂ ಪಬ್ಜಿ ಆಟ ಭಾರತದಲ್ಲಿ ಶುರುವಾಗುವುದಿಲ್ಲ.
ಕೇಂದ್ರ ಸರ್ಕಾರವು ಈ ಕುರಿತು ಸ್ಪಷ್ಟನೆ ನೀಡಿದ್ದು, ಇಲ್ಲಿಯವರೆಗೂ ಪಬ್‌ಜಿ ಯನ್ನು ಮರುಸ್ಥಾಪನೆಗೆ ಭಾರತದಲ್ಲಿ ಅವಕಾಶ ನೀಡಿಲ್ಲ ಎಂದು ಹೇಳಿದೆ.
ಚೀನಾ ಜತೆ ನಂಟು ಹೊಂದಿದ್ದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್ ಗೇಮ್ ಪಬ್‌ಜಿ ಮತ್ತೆ ಭಾರತಕ್ಕೆ ಬರುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು. ಪಬ್‌ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಈ ಗೇಮ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ ಎಂದು ಹೇಳಲಾಗಿತ್ತು.
ಭಾರತೀಯ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಹೊಸ ಗೇಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ ಗೇಮ್ ಬಳಕೆದಾರರಿಗೆ ಗರಿಷ್ಠ ಭದ್ರತೆಯನ್ನು ಒದಗಿಸುತ್ತದೆ ಮತ್ತು ಸ್ಥಳೀಯ ನಿಯಮಗಳಿಗೆ ಬದ್ಧವಾಗಿದೆ ಎನ್ನಲಾಗಿತ್ತು. ಆದರೆ ಸರ್ಕಾರವು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.





