ನವದೆಹಲಿ: ಸರ್ಕಾರಿ ತೈಲ ಸ್ವಾಮ್ಯದ ಕಂಪನಿಗಳು ಡಿಸೆಂಬರ್‌ನಲ್ಲ ಎರಡನೇ ಬಾರಿಗೆ ಗೃಹ ಬಳಕೆ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಿಸಲಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ.
ಇದು ಅಂತರರಾಷ್ಟ್ರೀಯ ಬೆಲೆಗಳನ್ನು ದೃಢಪಡಿಸಿದ ನಂತರ ಈ ತಿಂಗಳ ದರದಲ್ಲಿ ಎರಡನೇ ಹೆಚ್ಚಳವಾಗಿದೆ. ಜೊತೆಗೆ ವಾಯುಯಾನ ಇಂಧನ (ಎಟಿಎಫ್) ಬೆಲೆಯನ್ನು ಶೇಕಡಾ 6.3ರಷ್ಟು ಏರಿಸಲಾಗಿದೆ.
ರಾಜ್ಯ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು ಹಿಂದಿನ 644 ರೂ.ಗಳಿಂದ 694 ರೂ.ಗೆ ಹೆಚ್ಚಿಸಲಾಗಿದೆ.
ಭಾರತದಲ್ಲಿನ ಪ್ರತಿ ಕುಟುಂಬ ವರ್ಷಕ್ಕೆ ಗರಿಷ್ಠ 12 ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಸಬ್ಸಿಡಿ ದರದಲ್ಲಿ ಅವಕಾಶವಿದೆ.
ಜೂನ್ 2019 ರಲ್ಲಿ ದೆಹಲಿಯಲ್ಲಿ ಸಬ್ಸಿಡಿ ಪಡೆದ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ 497 ರೂ. ಆಗಿತ್ತು. ಅಂದಿನಿಂದ, ಬೆಲೆಗಳು ಒಟ್ಟು 147 ರೂ. ಹೆಚ್ಚಾಗಿದೆ. ಆದಾಗ್ಯೂ, ಈ ತಿಂಗಳು ದರಗಳ ಹೆಚ್ಚಳವು ಸರ್ಕಾರವು ಗ್ರಾಹಕರಿಗೆ ಸಬ್ಸಿಡಿ ಪಾವತಿಸುವುದನ್ನು ಪುನರಾರಂಭಿಸಬೇಕಾಗುತ್ತದೆ.





