ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಳಗೊಳ್ಳಳಿದೆ. ಎಲ್ಲ ಗ್ರಾ.ಪಂ.ಗಳಲ್ಲಿ ಪ್ರತಿದಿನ 100 ಮಂದಿಯನ್ನು ತಪಾಸಣೆಗೊಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಧನೆ ನಡೆಸುವ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅರ್ಹತಾಪತ್ರ ಮತ್ತು ಟ್ರಾಫಿ ನೀಡಲಾಗುವುದು. ಈ ಸಂಬಂಧ ಬ್ಲೋಕ್ ಮಟ್ಟದಲ್ಲಿ ಸಭೆ ನಡೆಸಿ ಚಟುವಟಿಕೆಗಳ ಅವಲೋಕನ ನಡೆಸಲಾಗುವುದು. ರೂಪಾಂತರಗೊಂಡಿರುವ ಕೋವಿಡ್ ಬೆಂಗಳೂರು, ಪುಣೆ, ಕಣ್ಣೂರು ಸಹಿತ ಪ್ರದೇಶಗಳಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಸರಗೋಡು ಜಿಲ್ಲೆಯಲ್ಲೂ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು. ಮಾಸ್ಟರ್ ಯೋಜನೆ, ವಾರ್ಡ್ ಮಟ್ಟದ ಜಾಗೃಥಿ ಸಮಿತಿಗಳು, ಸೆಕ್ಟರ್ ಮೆಜಿಸ್ಟ್ರೇಟರುಗಳು ಮೊದಲಾದ ಚಟುವಟಿಕೆಗಳನ್ನು ಕ್ಷಿಪ್ರಗೊಳಿಸಲಾಗುವುದು ಎಂದು ಸಭೆ ತಿಳಿಸಿದೆ.
ಪ್ರಧಾನ ತೀರ್ಮಾನಗಳು:
ಅನ್ ಲಾಕ್ ಸಂಬಂಧ ಸರಕಾರ ಪ್ರಕಟಿಸಿರುವ ನೂತನ ಆದೇಶದ ಎಲ್ಲ ವಿಚಾರಗಳೂ ಕಾಸರಗೋಡು ಜಿಲ್ಲೆಗೂ ಅನ್ವಯವಾಗಿವೆ. ಜಿಲ್ಲೆಯಲ್ಲಿ ಚಟುವಟಿಕೆ ನಡೆಸುತ್ತಿರುವಹೋಟೆಲ್ಗಳು, ರೆಸ್ಟಾರೆಂಟ್ ಗಳೂ ರಾತ್ರಿ 10 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು.
ಅಬಕಾರಿ ಕೇಸುಗಳಲ್ಲಿ ವಶಪಡಿಸಲಾದ ವಾಹನಗಳನ್ನು ಆನ್ ಲೈನ್ ಹರಾಜಿನ ಮೂಲಕ ಮಾರಾಟ ನಡೆಸಲಾಗದೇ ಇರುವ ಹಿನ್ನೆಲೆಯಲ್ಲಿ ಕೋವಿಡ್ ಸಂಹಿತೆ ಪಾಲಿಸಿ ಹರಾಜು ನಡೆಸಲು ನಿರ್ಧರಿಸಲಾಗಿದೆ.
ಉತ್ತರ ಮಲಬಾರ್ ತೀಯಾ ಜನಾಂಗದವರು ಈ ವರ್ಷದ ಕಳಿಯಾಟ ಮಹೋತ್ಸವ , ಭರಣಿ ಮಹೋತ್ಸವ ಮುಂದೂಡಲು ನಿರ್ಧರಿಸಿರುವುದು ಮಾದರಿಯಾಗಿದೆ ಎಂದು ಜಿಲ್ಲಧಿಕಾರಿ ತಿಳಿಸಿದರು.
ಕರ್ನಾಟಕದ ಗಡಿ ಹೊಂದಿರುವ ಜಿಲ್ಲೆಯಲ್ಲಿ ಅತೀವ ಜಾಗರೂಕತೆ ಮುಂದುವರಿಸಬೇಕಿದೆ. ಮಾಸ್ಕ್ ಧರಿಸದೇ ಇರುವವರ ವಿರುದ್ಧ ಪೆÇಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಕೇಸುಗಳು ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಡಿ.ಶಿಲ್ಪಾ ತಿಳಿಸಿದರು. ಮಂಜೇಶ್ವರ ಭಾಗದಲ್ಲಿ ಹೆಚ್ಚುವರಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಧಿಕಾರಿ ಆದೇಶ ನೀಡಿದರು.
ಕೋವಿಡ್ ಸಂಹಿತೆ ಉಲ್ಲಂಘನೆ ಪತ್ತೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಣೆ ಹೊಂದಿರುವ ಸೆಕ್ಟರ್ ಮೆಜಿಸ್ಟ್ರೇಟರುಗಳಿಗೆ ಆದೇಶಿಸಲಾಗಿದೆ.
ಕರ್ನಾಟಕದ ಕೆಲವೆಡೆಗಳಿಂದ ಕೋವಿಡ್ ನೆಗೆಟಿವ್ ಸಂಬಂಧ ನಕಲಿ ಸರ್ಟಿಫಿಕೆಟ್ ಪಡೆದು ಜಿಲ್ಲೆಗೆ ಬರುವ ಕೆಲವರ ಬಗ್ಗೆ ವರದಿ ಲಭಿಸಿದ್ದು, ಇಂಥಾ ವ್ಯಕ್ತಿಗಳ, ಪ್ರಯೋಗಾಲಯಗಳ ಪತ್ತೆ ನಡೆಸಿ ಕಠಿಣ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆಗ್ರಹಿಸಿದರು. ಈ ಸಂಬಂಧ ದಕ್ಷಿಣ ಕನ್ನಡ ಕಮೀಷನರ್ ಅವರಿಗೆ ವರದಿ ಸಲ್ಲಿಸಲಾಗುವುದು.
ಕೋವಿಡ್ ಸಂಬಂಧ ತಪಾಸಣೆಗಳನ್ನು ಹೆಚ್ಚಳಗೊಳಿಸಲು ಡಾಟಾ ಎಂಟ್ರಿ ಕರ್ತವ್ಯಕ್ಕೆ ಹೆಚ್ಚುವರಿ ಪ್ರಾಥಮಿಕ ಶಿಕ್ಷಕರ ನೇಮಕ ನಡೆಸಲಾಗುವುದು.
ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಕೋವಿಡ್ ಸೋಂಕು ಹಾವಳಿ ಇರುವುದೇ ಎಂದು ಪ್ರಮೋಟರ್ ಗಳ ಮೂಲಕ ಮಾಹಿತಿ ಸಂಗ್ರಹಿಸಿ ಅಗತ್ಯದ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ.
ಪಡಿತರ ಕಿಟ್ ಗಳನ್ನು ಯಾವುದೇ ತಡೆಗಳಿಲ್ಲದೆ ಸಾರ್ವಜನಿಕರಿಗೆ ವಿತರಣೆ ನಡೆಸಲಾಗುತ್ತಿದೆ ಎಂದು ಖಚಿತತೆ ಮೂಡಿಸಲಾಗುತ್ತಿದೆ. ದೂರುಗಳಿಗೆ ಆಸ್ಪದ ನೀಡದೆ ಪೂರೈಕೆ ನಡೆಯುತ್ತಿದೆ ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿದರು.
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಪೆÇೀಸ್ಟ್ ಮೆಟ್ರಿಕ್, ಮಾದರಿ ವಸತಿ ಶಾಲೆ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಆರಂಭಗೊಂಡಿದೆ. ಪ್ರವೇಶಾತಿಗೆ ಆಗಮಿಸುವ ವಿದ್ಯಾರ್ಥಿಗಳ ಆಂಟಿಜೆನ್ ಟೆಸ್ಟ್ ನಡೆಸಲಾಗುವುದು.
ಟ್ಯೂಷನ್ ಸೆಂಟರ್ ಗಳಲ್ಲಿ ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದು ಖಚಿತತೆ ಮೂಡಿಸಲು ಸೆಕ್ಟರಲ್ ಮೆಜಿಸ್ಟ್ರೇಟರುಗಳಿಗೆ ಹೊಣೆ ನೀಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.