HEALTH TIPS

ಬೆಂಕಿ ಅವಘಡದಿಂದ ಸೀರಂ ಇನ್‌ಸ್ಟಿಟ್ಯೂಟ್‌ಗೆ 1,000 ಕೋಟಿ ನಷ್ಟ

         ಮುಂಬೈ'ಬೆಂಕಿ ಅವಘಡದಿಂದ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆ, ಪೂರೈಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಅನಾಹುತದಿಂದ ಸೀರಂ ಇನ್‌ಸ್ಟಿಟ್ಯೂಟ್‌ಗೆ 1,000 ಕೋಟಿ ನಷ್ಟವಾಗಿದೆ,' ಎಂದು ಸಂಸ್ಥೆಯ ಸಿಇಒ ಆದರ್‌ ಪೂನಾವಾಲ ಹೇಳಿದ್ದಾರೆ.

         ಮುಂಬೈನಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದರ್‌ ಪೂನಾವಾಲ ಈ ವಿಷಯ ಬಹಿರಂಗಪಡಿಸಿದ್ದಾರೆ.

ಕೋವಿಡ್‌ ಲಸಿಕೆಯ ಉತ್ಪಾದನೆ, ಪೂರೈಕೆ ಮೇಲೆ ಬೆಂಕಿ ಅವಘಡವು ಯಾವುದೇ ಪರಿಣಾಮ ಬೀರುವುದಿಲ್ಲ. ಹೇಳಬೇಕೆಂದರೆ, ಅನಾಹುತ ಸಂಭವಿಸಿದ ಕಟ್ಟಡದಲ್ಲಿ ಲಸಿಕೆಯ ಉತ್ಪಾದನೆಯೂ ನಡೆಯುತ್ತಿರಲಿಲ್ಲ. ಆದರೆ, ಘಟನೆಯಲ್ಲಿ ಸೀರಂ ಇನ್‌ಸ್ಟಿಟ್ಯೂಟ್‌ಗೆ 1,000 ಕೋಟ್‌ ನಷ್ಟ ಸಂಭವಿಸಿದೆ ಎಂದು ಪೂನಾವಾಲ ಹೇಳಿದರು.

        ಘಟನೆಯಿಂದ ನಮಗೆ ಆರ್ಥಿಕ ನಷ್ಟ ಸಂಭವಿಸಿದೆ. ಈ ನಷ್ಟವು ಭವಿಷ್ಯದಲ್ಲಿ ಬಿಸಿಜಿ ಮತ್ತು ರೋಟಾ ವೈರಸ್‌ ಲಸಿಕೆಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದರು.

ಬೆಂಕಿಯಿಂದಾಗಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಗೆ ತೊಂದರೆಯಾಗಿಲ್ಲ. ದಾಸ್ತಾನಿಗೂ ಸಮಸ್ಯೆಯಾಗಿಲ್ಲ ಎಂದು ಪೂನಾವಾಲ ಸ್ಪಷ್ಟಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries