HEALTH TIPS

ನೀವು ಈ ಆಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್

       ಬೆಂಗಳೂರು: ಇತ್ತೀಚೆಗಷ್ಟೇ ವಾಟ್ಸ್‌ಆಯಪ್​ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆ ಬಗ್ಗೆ ಭಾರಿ ಆತಂಕ ಸೃಷ್ಟಿಯಾಗಿ ಬಹಳಷ್ಟು ಮಂದಿ ವಾಟ್ಸ್​ಆಯಪ್​ ಅನ್​ಇನ್​ಸ್ಟಾಲ್​ ಮಾಡಿದ್ದರೆ, ಇನ್ನು ಹಲವರು ಅದರ ಬದಲು ಟೆಲಿಗ್ರಾಂ ಹಾಗೂ ಸಿಗ್ನಲ್​ ಆಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ. ಕೆಲವು ಆಯಪ್​ಗಳಿಂದ ಹೀಗೆ ಖಾಸಗಿತನದ ಹರಣವಾಗುತ್ತಿರುವ ಆತಂಕ ಎದುರಾಗುತ್ತಿರುವ ಬೆನ್ನಿಗೇ ಈಗ ಆಯಪ್​ವೊಂದರ ಡೇಟಾ ಹ್ಯಾಕ್​ ಆಗಿರುವ ಮಾಹಿತಿ ಹೊರಬಿದ್ದಿದೆ.

      ಫೋಟೋ ಎಡಿಟ್​ ಮಾಡಲು ಕೆಲವರು ಬೇರೆ ಬೇರೆ ಆಯಪ್​ಗಳನ್ನು ಬಳಸುತ್ತಿರುವುದು ಹೊಸದೇನಲ್ಲ. ಇದೀಗ ಅಂಥ ಒಂದು ಫೋಟೋ ಎಡಿಟ್​ ಆಯಪ್​ ಬಳಸುತ್ತಿರುವವರೆಲ್ಲ ಆತಂಕಕ್ಕೆ ಒಳಗಾಗುವಂತಾಗಿದೆ. ಏಕೆಂದರೆ ಈ ತಂತ್ರಾಂಶವನ್ನು ಶೈನಿ ಹಂಟರ್ಸ್ ಎಂಬಾತ ಹ್ಯಾಕ್​ ಮಾಡಿದ್ದು, 19 ಲಕ್ಷ ಬಳಕೆದಾರರ ಮಾಹಿತಿಗಳನ್ನು ಕದ್ದಿದ್ದಾನೆ. ಫೋಟೋ ಎಡಿಟ್ ಮಾಡಲು ಬಳಸುತ್ತಿರುವ ಉಚಿತ ಆಯಪ್​ ಪಿಕ್ಸಲರ್ (Pixlr) ಶೈನಿ ಹಂಟರ್ಸ್​​ನಿಂದ ಹ್ಯಾಕ್​ಗೆ ಒಳಗಾಗಿದೆ ಎಂಬುದು ವರದಿಯಾಗಿದೆ.

      ಈತ ಹ್ಯಾಕ್​ ಮಾಡಿರುವ ಮಾಹಿತಿಗಳಲ್ಲಿ ಬಳಕೆದಾರರ ಇ-ಮೇಲ್ ಅಡ್ರೆಸ್​, ಲಾಗಿನ್​ ನೇಮ್, ಎಸ್​ಎಚ್​ಎ-512 ಹ್ಯಾಷ್ಡ್​ ಪಾಸ್​ವರ್ಡ್​, ಬಳಕೆದಾರರ ಮೂಲ ಇತ್ಯಾದಿ ಅಂಶಗಳಿವೆ. 123ಆರ್​ಎಫ್​ ಎಂಬ ಫೋಟೋ ಸ್ಟಾಕ್​ ಸೈಟ್​ ಹ್ಯಾಕ್​ ಮಾಡುವ ಮೂಲಕ ತಾನು ಪಿಕ್ಸಲರ್​ನಿಂದ ಮಾಹಿತಿ ಕದ್ದಿರುವುದಾಗಿ ಶೈನಿ ಹೇಳಿಕೊಂಡಿದ್ದಾನೆ. 123ಆರ್​ಎಫ್​ ಸ್ಟಾಕ್​ ಫೋಟೋ ಸೈಟ್ ಹಾಗೂ ಪಿಕ್ಸಲರ್ ಫೋಟೋ ಎಡಿಟ್​ ಆಯಪ್​ ಎರಡೂ ಇನ್​ಮ್ಯಾಜಿನ್ ಎಂಬ ಒಂದೇ ಕಂಪನಿಗೆ ಸೇರಿದ್ದಾಗಿವೆ. ಹ್ಯಾಕ್​ ಹಿನ್ನೆಲೆಯಲ್ಲಿ ಪಿಕ್ಸಲರ್ ಬಳಕೆದಾರರು ಪಾಸ್​ವರ್ಡ್​ ಬದಲಿಸುವಂತೆ ಸಲಹೆ ನೀಡಲಾಗಿದೆ. ಆದರೆ ಈ ಹ್ಯಾಕ್​ ಬಗ್ಗೆ ಪಿಕ್ಸಲರ್​ನಿಂದ ಯಾವುದೇ ಪ್ರತಿಕ್ರಿಯೆ ಅಧಿಕೃತವಾಗಿ ಇನ್ನೂ ವ್ಯಕ್ತವಾಗಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries