ತಿರುವನಂತಪುರ: ತಿರುವನಂತಪುರದ ಕಾಟ್ಟಾಕಡದ ಅಂಗಡಿಯೊಂದರ ರದ್ದಿಯಲ್ಲಿ ಆಧಾರ್ ಕಾರ್ಡ್‍ಗಳು ಪತ್ತೆಯಾಗಿದ್ದು, ಘಟನೆಯ ಬಗ್ಗೆ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಪೋಲೀಸರು ನೀಡಿದ ಮಾಹಿತಿಯನ್ವಯ ಅಂಚೆ ಇಲಾಖೆಯ ಉದ್ಯೋಗಿಯ ಪತಿಯ ಅಂಗಡಿಯಲ್ಲಿ ಆಧಾರ್ ಕಾರ್ಡ್‍ಗಳು, ಬ್ಯಾಂಕ್ ಮತ್ತು ವಿಮಾ ಕಂಪನಿಯ ದಾಖಲೆಗಳನ್ನು ರದ್ದಿಯಲ್ಲಿ ಮಾರಾಟ ಮಾಡಿದ್ದಾರೆ. ಕುಡಿತದ ಚಟವಿರುವ ಪತಿ ದಾಖಲೆ ಪತ್ರಗಳು ಮತ್ತು ಪ್ರಮುಖ ಇತರ ದಾಖಲೆಗಳನ್ನು ಮಾರುತ್ತಿರುವುದು ಗಮನಕ್ಕೆ ಬಂದಿದೆ. ಘಟನೆಯಲ್ಲಿ ಪೋಸರು ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ಬೆಳಿಗ್ಗೆ, ಸದಾಶಿವನ್ ಅವರ ಅಂಗಡಿಯಲ್ಲಿ ಆಧಾರ್ ದಾಖಲೆಗಳ ಒಂದು ಕಟ್ಟು ಪತ್ತೆಯಾಗಿತ್ತು. ಅಂಗಡಿಯವರು ರದ್ದಿ ಪೇಪರ್ ಗಳನ್ನು ವಿಂಗಡಿಸುತ್ತಿದ್ದಂತೆ ಕಾರ್ಡ್‍ಗಳು ಗಮನಕ್ಕೆ ಬಂದವು. ಬಳಿಕ ಕಾಟ್ಟಾಕಡದ ಪೋಲೀಸರಿಗೆ ಮಾಹಿತಿ ನೀಡಿದರು. ಇವು ಕರಮಕುಲಂ ಪ್ರದೇಶದಲ್ಲಿ ವಿತರಿಸಬೇಕಾದ ದಾಖಲೆಗಳು ಎಂದು ವಿಳಾಸವನ್ನು ನೋಡಿ ಪೋಲೀಸರು ಸ್ಪಷ್ಟಪಡಿಸಿರುವರು. ಈ ಪ್ರದೇಶದ ಅಂಚೆ ಕಚೇರಿಗಳ ಮೇಲೆ ಕೇಂದ್ರೀಕರಿಸಿದ ತನಿಖೆಯು ಅಂಚೆ ಇಲಾಖೆಯ ತಾತ್ಕಾಲಿಕ ಉದ್ಯೋಗಿಯ ಕರ್ತವ್ಯ ಲೋಪವನ್ನು ಎತ್ತಿತೋರಿಸಿತು.
ಪೋಲೀಸರು ಪ್ರಶ್ನಿಸಿದಾಗ, ತನ್ನ ಕುಡುಕ ಪತಿ ದಾಖಲೆ ಪತ್ರಗಳನ್ನು ಅಂಗಡಿಗೆ ರದ್ದಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದರು. ನೌಕರೆ ಮತ್ತು ಆಕೆಯ ಪತಿಯನ್ನು ಪ್ರಶ್ನಿಸಿದ ನಂತರ ಬಿಡುಗಡೆ ಮಾಡಲಾಗಿದೆ. ಅಂಚೆ ವಸ್ತುಗಳು ಕಾಣೆಯಾಗಿವೆ ಎಂದು ಆ ಪ್ರದೇಶದ ನಾಗರಿಕರಿಂದ ದೂರು ಬಂದರೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪೋಲೀಸರು ತಿಳಿಸಿದ್ದಾರೆ.





