ಕೋಝಿಕ್ಕೋಡ್: ಯುವ ಸಮುದಾಯದಲ್ಲಿ ತಳವೂರುವ ಸಾಧ್ಯತೆಗಳಿರುವ ಮಾವೋವಾದಿ ಸಂಪರ್ಕಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ತನಿಖೆ ನಡೆಸಲಿದೆ. ರಾಜಕೀಯ ಪಕ್ಷಗಳಲ್ಲಿ ನುಸುಳುತ್ತಿರುವ ಸಕ್ರಿಯ ಯುವಕರನ್ನು ಕೇಂದ್ರೀಕರಿಸಿ ಮಾವೋವಾದಿಗಳ ಸಂಪರ್ಕವನ್ನು ತಡೆಯುವ ಉದ್ದೇಶದಿಂದ ತನಿಖೆ ನಡೆಸಲಾಗಿದೆ.
ತನಿಖೆ ಕೋಝಿಕೋಡ್, ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಕೇಂದ್ರೀಕರಿಸಿ ನಡೆಯುತ್ತಿದೆ. ಮಾವೋವಾದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಂಧನಕ್ಕೊಳಗಾದ ವಿಜೀತ್ ವಿಜಯನ್ ಅವರನ್ನು ಪ್ರಶ್ನಿಸಲಾಗುತ್ತಿದೆ. ಪಂದಿರಕ್ಕಾವ್ ಮಾವೋವಾದಿ ಪ್ರಕರಣದಲ್ಲಿ ಆರೋಪಿಗಳಾದ ತಾಹಾ ಫಸಲ್ ಮತ್ತು ಅಲನ್ ಸುಹೈಲ್ ರೊಂದಿಗೆ ವಿಜೀತ್ ವಿಜಯನ್ ಗೆ ಸಂಪರ್ಕವಿತ್ತೆಂದು ತಿಳಿದುಬಂದಿದೆ.
ವಿಜಿತ್ ಅವರನ್ನು ಮಾವೋವಾದಿ ಕಾರ್ಯಕರ್ತರನ್ನಾಗಿ ಮಾಡಲು ತಾಹಾ ಹಾಗೂ ಅಲನ್ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲನ್ ಮತ್ತು ತಾಹಾ ಅವರನ್ನು ತನಿಖೆಗೊಳಪಡಿಸಿದಾಗ ಅವರ ಹೇಳಿಕೆಗಳ ಆಧಾರದ ಮೇಲೆ ವಿಜಿತ್ ನನ್ನು ಇದೀಗ ತನಿಖಾ ತಂಡವು ತನಿಖೆಗೊಳಪಡಿಸಿದೆ ಎಂದು ಎನ್.ಐ.ಎ ಅಧಿಕೃತರು ತಿಳಿಸಿದ್ದಾರೆ.





