ತಿರುವನಂತಪುರ: ರಾಜ್ಯದಲ್ಲಿ ಭೂಮಿ ಮತ್ತು ಕಟ್ಟಡ ನೋಂದಣಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. 1 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಭೂಮಿ ಮತ್ತು ಕಟ್ಟಡ ನೋಂದಣಿ ವಹಿವಾಟಿನ ಮೇಲೆ ಶೇ.2 ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ. ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಎಸ್‍ಎಂ ವಿಜಯಾನಂದ್ ನೇತೃತ್ವದ ಆಯೋಗವು 25 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಭೂಮಿ ಅಥವಾ ಕಟ್ಟಡಗಳ ಮೌಲ್ಯದ ಒಂದು ಶೇಕಡಾವನ್ನು ತೆರಿಗೆಯಾಗಿ ಸಂಗ್ರಹಿಸಿ ಜಿಲ್ಲಾ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಇದರ ಬದಲಿಗೆ ಸರ್ಕಾರವು ಒಂದು ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ದರವನ್ನು ಶೇ.2 ಕ್ಕೆ ಏರಿಸುವ ನಿರ್ಧಾರ ಕೈಗೊಂಡಿದೆ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ವಿಧಾನಸಭೆಗೆ ತಿಳಿಸಿದರು. ಮೊತ್ತವನ್ನು ನೋಂದಣಿ ಇಲಾಖೆಯಿಂದ ಸಂಗ್ರಹಿಸಿ ಆಯಾ ಜಿಲ್ಲಾ ಪಂಚಾಯತ್ ಗಳಿಗೆ ಹಸ್ತಾಂತರಿಸಬೇಕು ಎಂದು ಥಾಮಸ್ ಐಸಾಕ್ ಕ್ರಿಯಾ ವರದಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ, ಭೂ ವ್ಯವಹಾರವು ಶೇ. 8 ಸ್ಟಾಂಪ್ ಡ್ಯೂಟಿ ಮತ್ತು ಶೇ.2 ನೋಂದಣಿ ಶುಲ್ಕಕ್ಕೆ ಒಳಪಟ್ಟಿರುತ್ತದೆ. ಹೊಸ ತೆರಿಗೆ ಸೇರ್ಪಡೆಯೊಂದಿಗೆ, ನೋಂದಣಿ ವೆಚ್ಚವು ಭೂಮಿ / ಕಟ್ಟಡದ ನ್ಯಾಯಯುತ ಮೌಲ್ಯದ ಶೇ.12 ರಷ್ಟುವರ್ಧನೆಗೊಳ್ಳಲಿದೆ.





