ತಿರುವನಂತಪುರ: ರಾಜ್ಯಮಟ್ಟದ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಾಳೆ(ಜನವರಿ 26) ಬೆಳಿಗ್ಗೆ 9 ಗಂಟೆಗೆ ತಿರುವನಂತಪುರ ಕೇಂದ್ರ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಸಶಸ್ತ್ರ, ಪೋಲೀಸ್, ಅರೆಸೈನಿಕ ಮತ್ತು ಎನ್‍ಸಿಸಿ ಮೆರವಣಿಗೆಗಳು ನಡೆಯಲಿವೆ. ಕೊರೋನಾ ಮಾನದಂಡಗಳಿಗೆ ಅನುಗುಣವಾಗಿ ಸಮಾರಂಭಗಳು ನಡೆಯಲಿವೆ.
ಕ್ರೀಡಾಂಗಣದೊಳಗೆ 100 ಮಂದಿ ಆಹ್ವಾನಿತ ಅತಿಥಿಗಳು ಮಾತ್ರ ಪಾಲ್ಗೊಳ್ಳುವರು. ರಾಷ್ಟ್ರಧ್ವಜವನ್ನು ಉಪ ಜಿಲ್ಲಾ ಮಟ್ಟದಲ್ಲಿ ಉಪ ಜಿಲ್ಲಾ ನ್ಯಾಯಾಧೀಶರು ಮತ್ತು ಬ್ಲಾಕ್ ಮಟ್ಟದಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷರು ಹಾರಿಸಿದ್ದಾರೆ. ಈ ಸಂದರ್ಭ ಗರಿಷ್ಠ 75 ಜನರಿಗೆ ಮಾತ್ರ ಪ್ರವೇಶಾನುಮತಿ ನೀಡಲಾಗಿದೆ. ರಾಷ್ಟ್ರಧ್ವಜವನ್ನು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಪಂಚಾಯತಿ ಮಟ್ಟದಲ್ಲಿ ಹಾರಿಸಲಿದ್ದಾರೆ. ಪ್ರವೇಶ ಗರಿಷ್ಠ 50 ಜನರಿಗೆ ಸೀಮಿತವಾಗಿದೆ.
ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಶಾಲೆಗಳಲ್ಲಿನ ಕಾರ್ಯಕ್ರಮಗಳಿಗೆ ಪ್ರವೇಶ ಗರಿಷ್ಠ 50 ಮಂದಿಗೆ ಮಾತ್ರ ಸೀಮಿತವಾಗಿರುತ್ತದೆ. ಕೊರೋನಾ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್, ನೈರ್ಮಲ್ಯೀಕರಣದಂತಹ ಎಲ್ಲಾ ಆರೋಗ್ಯ ನಿಬಂಧನೆಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಸಮಾರಂಭಗಳಿಗೆ ಸಾರ್ವಜನಿಕರಿಗೆ, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಪ್ರವೇಶವಿರುವುದಿಲ್ಲ.


