ಕೊಚ್ಚಿ: ಚಾಲನೆಯಲ್ಲಿರುವಾಗ ವೇನಾಡ್ ಎಕ್ಸ್‍ಪ್ರೆಸ್ ರೈಲಿನ ಎಂಜಿನ್ ಮುರಿದು ಬಿದ್ದ ಘಟನೆ ಭಾನುವಾರ ಬೆಳಿಗ್ಗೆ ಎರ್ನಾಕುಳಂ ಉತ್ತರ ರೈಲು ನಿಲ್ದಾಣಕ್ಕೆ ಪ್ರವೇಶಿಸುವಾಗ ಸಂಭವಿಸಿದೆ.
ಆದರೆ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ದೊಡ್ಡ ಅಪಘಾತ ತಪ್ಪದೆ. ಘಟನೆ ನಡೆದ ಅಲ್ಪಹೊತ್ತಲ್ಲಿ ರೈಲ್ವೇ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಎಂಜಿನ್ ಮತ್ತು ಬೋಗಿ ನಡುವೆ ಮರುಸಂಪರ್ಕ ದುರಸ್ಥಿ ನಡೆಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು. ಬೆಳಿಗ್ಗೆ ತಿರುವನಂತಪುರಂನಿಂದ ಶೋರ್ನೂರ್‍ಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.


