HEALTH TIPS

ಕೇರಳದ 98 ಲಕ್ಷ ಮನೆಗಳಿಗೆ ನೀಡಲಾದ ವಿದ್ಯುತ್ತೀಕರಣ ಯೋಜನೆ ಕೇಂದ್ರ ಸರ್ಕಾರದ ನೆರವು-ರಾಜ್ಯ ಸರ್ಕಾರದ ಸುಳ್ಳು ಹೇಳಿಕೆಗಳು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗ

  

           ತಿರುವನಂತಪುರ: ಕೇರಳದಲ್ಲಿ ಕೇಂದ್ರ ಸರ್ಕಾರದ ಯೋಜನೆಯನ್ವಯ 08.13 ಲಕ್ಷ ಮನೆಗಳಿಗೆ ವಿದ್ಯುದ್ದೀಕರಣ ಮಾಡಲಾಗಿದೆ. ಕೇಂದ್ರ ಸರ್ಕಾರವು 2017 ರಲ್ಲಿ ಘೋಷಿಸಿದ 'ಸೌಭಾಗ್ಯ' ಯೋಜನೆಯ ಪ್ರಕಾರ ವಿದ್ಯುತ್ತೀಕರಣ ನಡೆಸಲಾಗಿದ್ದು, ಕೇಂದ್ರದ ಜನಪ್ರಿಯ ಯೋಜನೆಯಾದ ಸೌಭಾಗ್ಯ (ಪ್ರಧಾನಿ ಸಹಾಜ್ ಬಿಜಲಿ ಹರ್ ಘರ್ ಯೋಜನೆ) ಈಗಲೂ ಮುಂದುವರಿಯುತ್ತಿರುವುದಾಗಿ ತಿಳಿದುಬಂದಿದೆ. 

     ಆದರೆÀ ರಾಜ್ಯದಲ್ಲಿ ಸಂಪೂರ್ಣವಾಗಿ ವಿದ್ಯುದ್ದೀಕರಿಸಲು ವಿವಿಧೆಡೆಗಳಿಂದ ಸಾಲಪಡೆಯಲಾಗಿದ್ದು, ಕೇಂದ್ರ ಸರ್ಕಾರ ಯಾವ ನೆರವನ್ನೂ ನೀಡಿಲ್ಲ ಎಂದು ಕೇಂದ್ರದ ಯೋಜನಾ ಮೊತ್ತವನ್ನು ಮರೆಮಾಚಿ ಸಂಪೂರ್ಣ ವಿದ್ಯುತ್ತೀಕರಣ ರಾಜ್ಯ ಸರ್ಕಾರದ ಕೊಡುಗೆ ಎಂದು ರಾಜ್ಯ ಸರ್ಕಾರ ಬಿಂಬಿಸಲೆತ್ನಿಸುತ್ತಿರುವುದು ಬೆಳಕಿಗೆ ಬಂದು ಆಕ್ರೋಶಕ್ಕೆ ಕಾರಣವಾಗಿದೆ.

    ಕೇಂದ್ರ ಸರ್ಕಾರವು ರಾಜ್ಯದಲ್ಲಿ 98, 13,032 ಮನೆಗಳಿಗೆ ಸಂಪೂರ್ಣ ವಿದ್ಯುತ್ತೀಕರಣ ಮಾಡಿದೆ ಎಂದು ಕೆ.ಗೋವಿಂದ ನಂಬೂದಿರಿ ಎಂಬವರು ಇತ್ತೀಚೆಗೆ ಮಾಹಿತಿ ಹಕ್ಕಿನ ಮೂಲಕ ಕೇಳಿದ ಪ್ರಶ್ನೆಗೆ ಲಭ್ಯವಾದ ವಿವರಗಳಾಗಿವೆ.

   2020ರ ಮಾ.31ರ ವರೆಗೆ 41.32 ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರವು ವಿದ್ಯುತ್ತೀಕರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಒದಗಿಸಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಅಲ್ಲದೆ 54.59 ಕೋಟಿ ರೂ.ಗಳನ್ನು ಸಬ್ಸಿಡಿಯನ್ನೂ ನೀಡಲಾಗಿದೆ. ರೂರಲ್ ಇಲೆಕ್ಟ್ರಿಫಿಕೇಶನ್ ಯೋಜನೆಯನ್ವಯ ನಿಧಿ ಮಂಜೂರುಗೊಳಿಸಿ ನೀಡಲಾಗಿರುವುದಾಗಿದೆ;. 


   ವಿವಿಧ ಕೇಂದ್ರ ಯೋಜನೆಗಳಿಗೆ 2014 ರಿಂದ 2020ರ ವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರವು 40261 ಕೋಟಿ ರೂ.ಗಳನ್ನು ಈಗಾಗಲೇ ಒದಗಿಸಿದೆ.ಇದರಲ್ಲಿ ಸಾಲ, ಯೋಜನಾ ಮೊತ್ತ ಹಾಗೂ ಸಬ್ಸಿಡಿಗಳು ಒಳಗೊಂಡಿದೆ. 

    ವಿದ್ಯುತ್ತೀಕರಿಸಲು ಆಸಕ್ತಿ ವಹಿಸಿದ 3,19,207 ಮನೆಗಳಿಗೆ 2017 ಅಕ್ಟೋಬರ್ ನಿಂದ 2019 ಮಾರ್ಚ್ 31ರ ವರೆಗೆ ಸೌಭಾಗ್ಯ ಯೋಜನೆಯ ಮೂಲಕ ವಿದ್ಯುತ್ತೀಕರಿಸಿದ್ದು ದೀನ ದಯಾಳ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಗೆ 151.71 ಕೋಟಿ ರೂ.ಸಬ್ಸಿಡಿಯಾಗಿ ನೀಡಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಿದ್ಯುತ್ತೀಕರಣ ಯೋಜನೆಗೆ 655 ಕೋಟಿ ರೂ. ಸಾಲವೂ 148.44 ಕೋಟಿ ರೂ.ಸಬ್ಸಿಡಿ ನೀಡಲಾಗಿದೆ ಎಂದು ಕೇಂದ್ರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries