ತಿರುವನಂತಪುರ: ಅಪರೂಪದ ಪ್ರಬೇಧ ಒಸೇರಿಯಾಕ್ಕೆ ಸೇರಿದ ಎರಡು ಜಾತಿಯ ಇರುವೆಗಳನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಹೊಸದಾಗಿ ಗುರುತಿಸಲಾಗಿದೆ. ಅವುಗಳ ಕೊಂಬಿನ ತುಣುಕುಗಳ ಸಂಖ್ಯೆಯಿಂದ ಇತರ ಇರುವೆಗಳಿಂತ ಇವು ಪ್ರತ್ಯೇಕವಾಗಿದೆ.
ಕೇರಳದ ಪೆರಿಯಾರ್ ಟೈಗರ್ ರಿಸರ್ವ್ ನಲ್ಲಿ ಕಂಡುಬರುವ ಒಂದು ಪ್ರಭೇದಕ್ಕೆ ಒಸೆರಿಯಾ ಜೋಶಿ ಎಂದು ಹೆಸರಿಸಲಾಗಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‍ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‍ಸಿಎಎಂಆರ್) ನ ಪ್ರಸಿದ್ಧ ವಿಕಾಸಾತ್ಮಕ ಜೀವಶಾಸ್ತ್ರಜ್ಞ ಪ್ರೊ. ಅಮಿತಾಬ್ ಜೋಶಿ ಅವರ ಗೌರವಾರ್ಥವಾಗಿ ಈ ಹೆಸರು ಇರಿಸಲಾಗಿದೆ.
ಹೊಸ ಪ್ರಬೇಧಗಳನ್ನು ಸಾಮಾನ್ಯವಾಗಿ ಅದರ ಗುಣಲಕ್ಷಣಗಳು ಮತ್ತು ಸ್ಥಳದ ಆಧಾರದ ಮೇಲೆ ಹೆಸರಿಸಲಾಗುತ್ತದೆ. ಆದಾಗ್ಯೂ, ವಿಕಸನೀಯ ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ ಮತ್ತು ಜೀವಿವರ್ಗೀಕರಣ ಶಾಸ್ತ್ರದಂತಹ ನಿರ್ದಿಷ್ಟ ಸಂಶೋಧನಾ ಕ್ಷೇತ್ರಗಳಿಗೆ ನೀಡಿದ ಅನನ್ಯ ಕೊಡುಗೆಗಳನ್ನು ಗುರುತಿಸಿ ಈ ಕ್ಷೇತ್ರದ ಪ್ರಖ್ಯಾತ ವಿಜ್ಞಾನಿಗಳು ಹೊಸ ಪ್ರಬೇಧಗಳನ್ನು ಗುರುತಿಸುತ್ತಾರೆ.
ಈ ಪ್ರಬೇಧದಲ್ಲಿ ಮೊದಲ ಬಾರಿಗೆ, 10 ಕೊಂಬುಗಳನ್ನು ಹೊಂದಿರುವ 2 ಪ್ರತ್ಯೇಕ ವಿಭಾಗದ ವಿಶಿಷ್ಟ ಕೊಂಬಿನ ಇರುವೆಗಳು ಕಂಡುಬಂದಿದೆ. ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದ ಪ್ರೊ. ಹಿಮೇಂದರ್ ಭಾರತಿ ನೇತೃತ್ವದ ತಂಡವು ಹೊಸ ಇರುವೆಗಳನ್ನು ಕಂಡುಹಿಡಿದಿದೆ. ಆವಿಷ್ಕಾರವನ್ನು ಸೂಕೀಸ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.


