ಕಾಸರಗೋಡು: ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಗೆ ಶಾಶ್ವತ ಪರಿಹಾರ ಕಾಣಲು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವದಲ್ಲಿ ಐಶ್ವರ್ಯ ಕೇರಳ ಯಾತ್ರೆಯನ್ನು ಯೋಜಿಸುತ್ತಿದೆ ಎಂದು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ತಿಳಿಸಿದ್ದಾರೆ.
ಕಾಸರಗೋಡು ಬ್ಲಾಕ್ ಪಂಚಾಯತ್‌ನ ಚೆರ್ಕಳಂ ಅಬ್ದುಲ್ಲಾ ಸ್ಮಾರಕ ಭವನದಲ್ಲಿ ಯುಡಿಎಫ್ ಕಾಸರಗೋಡು ಜಿಲ್ಲಾ ನಾಯಕತ್ವ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಸಿ.ಟಿ.ಅಹ್ಮದಾಲಿ ಅಧ್ಯಕ್ಷತೆ ವಹಿಸಿದ್ದರು. ಜನರಲ್ ಕನ್ವೀನರ್ ಎ. ಗೋವಿಂದನ್ ನಾಯರ್ ಸ್ವಾಗತಿಸಿದರು.
ಐಶ್ವರ್ಯ ಕೇರಳ ಜಾಥಾ ಕೋ-ಆರ್ಡಿನೇಟರ್ ಶಾಸಕ ವಿ.ಡಿ.ಸತೀಶನ್ , ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ , ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ.ಇ. ಅಬ್ದುಲ್ಲಾ, ಡಿಸಿಸಿ ಅಧ್ಯಕ್ಷ ಹಕೀಮ್ ಕುನ್ನಿಲ್, ಶಾಸಕ ಎನ್‌ಎ ನೆಲ್ಲಿಕುನ್ನು , ಕಲ್ಲಟ್ರ ಮಾಹಿನ್ ಹಾಜಿ ಮತ್ತು ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ. ನೀಲಕಂಠನ್, ಬಾಲಕೃಷ್ಣನ್ ಪೆರಿಯಾ, ಅಡ್ವ. ಬಿ. ಸುಬ್ಬಯ್ಯ ರೈ, ಆರ್‌ಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಹರೀಶ್ ಬಿ. ನಂಬಿಯಾರ್, ಜೆಟ್ಟೋ ಜೋಸೆಫ್, ವಿ. ಕಮ್ಮಾರನ್, ಕರುಣಾಕರನ್, ಜೋಸೆಫ್, ಕೆ.ಪಿ. ಕುಂಞ್ ಕಣ್ಣನ್, ಮುನೀರ್ ಮುನಂಬಂ, ಅಡ್ವ. ಎ. ಗೋವಿಂದನ್ ನಾಯರ್, ಪಿ.ಕೆ.ಫೈಸಲ್, ಕೆ. ಮುಹಮ್ಮದ್ ಕುಂಞ್, ವಿ.ಪಿ.ಅಬ್ದುಲ್ ಖಾದರ್, ಪಿ.ಎಂ. ಮುನೀರ್ ಹಾಜಿ, ಮೂಸಾ ಬಿ. ಚೆರ್ಕಳ ಮಾತನಾಡಿದರು.

