ಕೊಚ್ಚಿ: ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಅವರನ್ನು ಪ್ರಶ್ನಿಸಲು ಕಸ್ಟಮ್ಸ್ ಸಿದ್ಧತೆ ನಡೆಸಿದೆ. ವಿಚಾರಣೆಗೆ ಕರೆಸಿಕೊಳ್ಳಲು ನೋಟಿಸ್ ಸಿದ್ಧಪಡಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಮತ್ತು ಶೀಘ್ರದಲ್ಲೇ ಪ್ರಶ್ನಿಸಲಾಗುವುದು ಎಂದು ತಿಳಿದುಬಂದಿದೆ.
ವಿಧಾನಸಭೆ ಅಧಿವೇಶನ ಮುಕ್ತಾಯಗೊಳ್ಳುತ್ತಿರುವಂತೆ ಕಸ್ಟಮ್ಸ್ ಪ್ರಕ್ರಿಯೆ ತೀವ್ರಗೊಳಿಸಿದೆ. ಯಾವುದೇ ಅಹಿತಕರ ಕಾನೂನು ಉಲ್ಲಂಘನೆಗೆ ಆಸ್ಪದವಾಗದಂತೆ ಮೂರು ಹಂತದ ಕಾನೂನು ಸಲಹೆ ಪಡೆದ ನಂತರ ನೋಟಿಸ್ ತಯಾರಿಸಲಾಗುತ್ತದೆ.
ಈ ಹಿಂದೆ, ಸ್ಪೀಕರ್‌ನ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯನ್ನು ಪ್ರಶ್ನಿಸುವ ನೋಟಿಸ್ ನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರಿಂದ, ಸಚಿವಾಲಯ ಮತ್ತು ಕಸ್ಟಮ್ಸ್ ನಡುವೆ ಸಮಸ್ಯೆಗಳು ಉದ್ಭವಿಸಿದ್ದವು. ಈ ಹಿನ್ನೆಲೆಯಲ್ಲಿಯೇ ಬಲವಾದ ಕಾನೂನು ಸಲಹೆಯನ್ನು ಸ್ವೀಕರಿಸಲಾಯಿತು. ಕಸ್ಟಮ್ ನಿಯಮಗಳ ಅಡಿಯಲ್ಲಿ ಸ್ಪೀಕರ್ ಅವರನ್ನು ಪ್ರಶ್ನಿಸಲು ಯಾವುದೇ ಕಾನೂನು ತೊಡಕುಗಳಿಲ್ಲ ಎಂದು ಸಹಾಯಕ ಸಾಲಿಸಿಟರ್ ಜನರಲ್ ಹೇಳಿದರು. ತನಿಖೆಯನ್ನು ಯಾವುದೇ ರೀತಿಯಲ್ಲಿ ಅಡ್ಡಿಪಡಿಸಲು ಬಯಸುವುದಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

