ಕಾಸರಗೋಡು: ಹಸಿರು ಕೇರಳ ಮಿಷನ್‍ನ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಹಸಿರು ಕೇರಳ ಮಿಷನ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಬಂಧ ರಚನೆ ಸ್ಪರ್ಧೆಯಲ್ಲಿ ದಿಲೀಪ್ ಕುಮಾರ್ ಪಿ., ರಾಜನ್ ಮುನಿಯೂರು, ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. ಹಸಿರು ಸಂಹಿತೆ ಪಾಲಿಸಿಕೊಂಡು ನಡೆಸಲಾದ ಕ್ರಿಸ್ಮಸ್ ಆಚರಣೆಗಳ ಅಂಗವಾಗಿ ನಡೆಸಿದ್ದ ಗ್ರೀನ್ ಕ್ರಿಸ್ಮಸ್ ಸ್ಪರ್ಧೆಯಲ್ಲಿ ಅಮಿತಾ ಕುಮಾರಿ ಬಿ. ಮತ್ತು ಸ್ನೇಹಾ ಎಂ. ಬಹುಮಾನ ಗಳಿಸಿದರು. ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸನ್, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕಿ ಲಕ್ಷ್ಮಿ ಎ., ಪಂಚಾಯಿತಿ ಸಹಾಯಕ ನಿರ್ದೇಶಕ ಧನೇಶ್ ಪಿ.ಎಂ. ಉಪಸ್ಥಿತರಿದ್ದರು.





