ಕಾಸರಗೋಡು: ಚೂರಿಪಳ್ಳದ ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ ನೇತೃತ್ವದಲ್ಲಿ ಮಂಗಳೂರಿನ ಪ್ರಸಾದ್ ನೇತ್ರಾಲಯ ಸ್ಪಷ್ಯಾಲಿಟಿ ಆಸ್ಪತ್ರೆ ಮತ್ತು ಡಾ. ದಯಾನಂದ ಪೈ-ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್‍ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಜ. 24ರಂದು ಬೆಳಗ್ಗೆ 9.30ಕ್ಕೆ ಚೂರಿಪಳ್ಳ ಶ್ರೀ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ಜರುಗಲಿದೆ.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಶಿಬಿರ ಉದ್ಘಾಟಿಸುವರು. ಶ್ರೀ ಅಯಯಪ್ಪ ಸೇಆ ಸಮಿತಿ ತಾಲೂಕು ಘಟಕ ಕಾಯದರ್ಶಿ ಚಂದ್ರ ಚೂರಿಪಳ್ಳ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಟೌನ್ ಕೋಓಪರೇಟಿವ್ ಬ್ಯಾಂಕ್ ಮಹಾ ಪ್ರಬಂಧಕ ಪಿ.ರಮೇಶ್ ಮುಖ್ಯ ಅತಥಿಯಾಗಿ ಭಾಗವಹಿಸುವರು.





