ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕಾಸರಗೋಡು ಜಿಲ್ಲಾಘಟಕದ ಮಹಾಸಭೆ ಭಾನುವಾರ ಕುಂಬಳೆಯ ಹೊಟೇಲ್ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಚ್ಯುತ ಚೇವರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ್ ಯಾದವ್ ಸ್ವಾಗತಿಸಿ ಪ್ರಾಸ್ತಾಪಿಸಿದರು. ಪ್ರಾರ್ಥನೆ, ವರದಿ ಮಂಡನೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಪದಾಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಅಬ್ದುಲ್‍ರಹಮಾನ್ ಸುಬ್ಬಯ್ಯಕಟ್ಟೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಗಂಗಾಧರ್ ಯಾದವ್, ಉಪಾಧ್ಯಕ್ಷರಾಗಿ ಪುರುಷೋತ್ತಮ ಭಟ್, ಜೊತೆ ಕಾರ್ಯದರ್ಶಿಯಾಗಿ ವಿವೇಕ್ ಆದಿತ್ಯ, ಸ್ಟೀಫನ್ ಕ್ರಾಸ್ತ, ಕೋಶಾಕಾರಿಯಾಗಿ ಪುರುಷೋತ್ತಮ ಪೆರ್ಲ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್‍ಕುಮಾರ್ ಬೇಕಲ್, ಅಬ್ದುಲ್ ರಹಮಾನ್ ಉದ್ಯಾವರ, ರತನ್ ಹೊಸಂಗಡಿ, ರವಿ ನಾಯ್ಕಾಪು, ಜಗನ್ನಾಥ ಶೆಟ್ಟಿ ಹಾಗೂ ಆರಿಫ್ ಮಚ್ಚಂಪಾಡಿ ಆಯ್ಕೆಯಾದರು. ಕೇಂದ್ರ ಸಮಿತಿ ಪ್ರತಿನಿಯಾಗಿ ಮಾಜಿ ಅಧ್ಯಕ್ಷ ಅಚ್ಯುತ ಚೇವರ್ ಅವರನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯಲ್ಲಿ ಅಜಿತ್ ಕುಮಾರ್, ವಿದ್ಯಾಗಣೇಶ್, ಅಬ್ದುಲ್‍ಸಲಾಂ, ಶಿವಶಂಕರ ಪೆರ್ಲ, ಸಾಯಿಭದ್ರ ರೈ, ವಿನಯ ಕಮಾರ್ ಕೆ ಮತ್ತಿತರರು ಉಪಸ್ಥಿತರಿದ್ದರು. ಪುರುಷೋತ್ತಮ ಪೆರ್ಲ ಕಾರ್ಯಕ್ರಮ ನಿರೂಪಿಸಿ, ಪುರುಷೋತ್ತಮ ಭಟ್ ವಂದಿಸಿದರು.



