ತಿರುವನಂತಪುರ: ಶಬರಿಮಲೆ ಸನ್ನಿಧಿಯಲ್ಲಿ ನಿರ್ಮಿಸಿರುವ ಆಧುನಿಕ ಆಹಾರ ಭವನವನ್ನು ಕೇಂದ್ರ ಸರ್ಕಾರದ ನಿಧಿಯಿಂದ ನಿರ್ಮಿಸಲಾಗಿದೆ ಎಂಬ ಸಂಘ ಪರಿವಾರದ ಪ್ರಚಾರವು ಆಧಾರರಹಿತವಾಗಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.
ಶಬರಿಮಲೆಯನ್ನು ರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ರಾಜ್ಯದ ಬೇಡಿಕೆಯನ್ನು ಮೋದಿ ಸರ್ಕಾರ ಕಡೆಗಣಿಸಿದೆ ಮತ್ತು ಈ ಆಹಾರ ಭವನಕ್ಕೆ ಒಂದು ರೂ. ಕೂಡ ಖರ್ಚು ಮಾಡಿಲ್ಲ. ಆಹಾರ ಭವನವು ಒಂದು ದೊಡ್ಡ ಕೊಡುಗೆಯಾಗಿದೆ. ಬಿಜೆಪಿ ಈ ಬಗ್ಗೆ ಯಾವುದೇ ಹಕ್ಕೊತ್ತಾಯಕ್ಕೆ ಬರಬಾರದು ಎಂದು ಅವರು ಫೇಸ್ಬುಕ್ ಪೆÇೀಸ್ಟ್ನಲ್ಲಿ ಬರೆದಿದ್ದಾರೆ.
ಈ ಹಿಂದೆ ವಿವಿಧ ಸಂಘ ಪರಿವಾರದ ಪೆÇ್ರಫೈಲ್ ಗಳಲ್ಲಿ ಅನ್ನದಾನ ಮಂಟಪವನ್ನು ನಿರ್ಮಿಸಿದ್ದಕ್ಕಾಗಿ ಮೋದಿ ಸರ್ಕಾರವನ್ನು ಅಭಿನಂದಿಸಿ ನಕಲಿ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಇದರ ಬಳಿಕ ಸಚಿವರು ಪ್ರತಿಕ್ರಿಯೆಯೊಂದಿಗೆ ಜಾಲತಾಣದಲ್ಲಿ ಸಮರ್ಥನೀಯ ಬರಹಗಳನ್ನು ಬರೆದಿರುವರು.
ಕಡಕಂಪಳ್ಳಿ ಸುರೇಂದ್ರನ್ ಅವರ ಫೇಸ್ಬುಕ್ ಪೆÇೀಸ್ಟ್:
ಶಬರಿಮಲೆ ಸನ್ನಿಧಿಯ ಆಧುನಿಕ ಫೀಡಿಂಗ್ ಹಾಲ್ ನ್ನು ಪಿಣರಾಯಿ ಸರ್ಕಾರದ ಹಣದಿಂದ ಮಾತ್ರ ನಿರ್ಮಿಸಲಾಗಿದೆ. ಅನ್ನದಾನ ಮಂಟಪ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 21.55 ಕೋಟಿ ರೂ. ವೆಚ್ಚಮಾಡಿದ್ದು ಏಷ್ಯಾದಲ್ಲೇ ಅತಿದೊಡ್ಡ ಆಹಾರ ಮಂಟಪಗಳಲ್ಲಿ ಒಂದಾದ ಇದು ಏಕಕಾಲದಲ್ಲಿ 5,000 ಯಾತ್ರಾರ್ಥಿಗಳಿಗೆ ಭೋಜನ ಸ್ವೀಕರಿಸಲು ಸಾಧ್ಯವಾಗುವ ವ್ಯವಸ್ಥೆ ಹೊಂದಿದೆ.
ಆದ್ದರಿಂದ ಸ್ನೇಹಿತರೇ, ಶಬರಿಮಲೆಯನ್ನು ರಾಷ್ಟ್ರೀಯ ಯಾತ್ರಾ ಕೇಂದ್ರವನ್ನಾಗಿ ಮಾಡುವ ರಾಜ್ಯದ ಬೇಡಿಕೆಯನ್ನು ಮೋದಿ ಸರ್ಕಾರ ಕಡೆಗಣಿಸಿದೆ ಮತ್ತು ಈ ಆಹಾರ ಮಂಟಪಕ್ಕೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಆಹಾರ ಮಂಟಪ ಒಂದು ದೊಡ್ಡ ಕೊಡುಗೆಯಾಗಿದೆ. ಅದಕ್ಕೆ ಹೊಂದಿಕೆಯಾಗದ ಹಕ್ಕು ಮಂಡಿಸಬೇಡಿ.
ಪಿಣರಾಯಿ ವಿಜಯನ್ ಸರ್ಕಾರದ ಈ ಕೊಡುಗೆ ಕಡೆಗಣಿಸಿ ಅನ್ನದಾನ ಮಂಟಪ ಕೇಂದ್ರದ ಕೊಡುಗೆ ಎಂದು ಬೊಬ್ಬೆ ಹೊಡೆಯುವವರಿಗೆ ಒಂದು ಗಾದೆ ನೆನಪಿಸಬಹುದು. ನಿಮ್ಮ ಪೂರ್ಣ ಸಾಮಥ್ರ್ಯಕ್ಕಿಂತ ಹೆಚ್ಚಿನದನ್ನು ಬಿಂಬಿಸಲು ಹೋಗಬೇಡಿ.





