ನವದೆಹಲಿ: ಕೇರಳದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಟೀಕಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕೇರಳದಲ್ಲಿ ವ್ಯಾಕ್ಸಿನೇಷನ್ ವೇಗವಾಗಿ ನಡೆಯುತ್ತಿಲ್ಲ. ಕೇರಳದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗಮನಿಸಿದೆ.
ವ್ಯಾಕ್ಸಿನೇಷನ್ ನಿಧಾನವಾಗಲು ಲಸಿಕೆಯ ಭಯವೇ ಕಾರಣ ಎಂದು ಕೇರಳದ ಕೇಂದ್ರಕ್ಕೆ ಪ್ರತಿಕ್ರಿಯೆ ನೀಡಿದೆ. ವ್ಯಾಕ್ಸಿನೇಷನ್ ಚಟುವಟಿಕೆಗಳ ನಿಧಾನಗತಿಯ ಬಗ್ಗೆ ರಾಜ್ಯದ ನಿರಾಸಕ್ತಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಈ ಬಗ್ಗೆ ಕಟು ಶಬ್ದಗಳಿಂದ ಪರಾಮರ್ಶೆ ನಡೆಸಿದ ಕೇಂದ್ರ ಸೋಮವಾರದ ವರೆಗೆ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಚಾಲನೆ ವೇಗವಾಗಿ ನಡೆಯುತ್ತಿಲ್ಲ ಎಂದು ಹೇಳಿದೆ.
ಆದ್ಯತೆಯ ಗುಂಪುಗಳಿಗೆ ವ್ಯಾಕ್ಸಿನೇಷನ್ ದರ ಕೇರಳದಲ್ಲಿ ಶೇ.25 ಕ್ಕಿಂತ ಕಡಿಮೆಯಿದೆ. ವ್ಯಾಕ್ಸಿನೇಷನ್ ಬಗ್ಗೆ ವಿಶ್ವಾಸ ಮೂಡಿಸಲು ಪ್ರಚಾರ ಸೇರಿದಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಕೇರಳಕ್ಕೆ ನಿರ್ದೇಶನ ನೀಡಿದೆ. ಕೇರಳವನ್ನು ಹೊರತುಪಡಿಸಿ, ತಮಿಳುನಾಡು, ಪಂಜಾಬ್ ಮತ್ತು ಛತ್ತೀಸ್‍ಗಡ್ ನಲ್ಲೂ ಲಸಿಕೆ ವೇಗವಾಗಿ ಪ್ರಗತಿಯಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.





