ತಿರುವನಂತಪುರ: ಕೇರಳದಲ್ಲಿ ಮುಂದಿನ ದಿನಗಳಲ್ಲಿ ಎನ್.ಡಿ.ಎ ಪ್ರಗತಿ ಸಾಧಿಸುವ ಬಗ್ಗೆ ಹೆಚ್ಚಿನ ಭರವಸೆ ಇದೆ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯ ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತೇನೆ ಎಂದು ಮಾಜಿ ಡಿಜಿಪಿ ಜಾಕೋಬ್ ಥಾಮಸ್ ಹೇಳಿದ್ದಾರೆ.
ಎಲ್.ಡಿ.ಎಫ್ ಮತ್ತು ಯು.ಡಿ.ಎಫ್ ಈವರೆಗೆ ರಾಜ್ಯವನ್ನು ಆಳಿದೆ ಮತ್ತು ರಾಜ್ಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಜಾಕೋಬ್ ಥಾಮಸ್ ಹೇಳಿದ್ದಾರೆ.
ಎಲ್ ಡಿ ಎಫ್ ಮತ್ತು ಯು ಡಿ ಎಫ್ ರೂಪಿಸಿದ ನೀತಿಗಳು ಕೇರಳದ ಪ್ರಗತಿಗೆ ತಕ್ಕುದಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ. ಅದರಲ್ಲಿ ಬದಲಾವಣೆ ಆಗಬೇಕು. ಪ್ರಸ್ತುತ ರಾಜಕೀಯ ವ್ಯವಸ್ಥೆ ಎನ್ ಡಿ ಎ. ಆದ್ದರಿಂದ ಕೇರಳದಲ್ಲಿ ಎನ್ ಡಿ ಎಯೇ ಅಧಿಕಾರಕ್ಕೆ ಬಂದರೆ ಮಾತ್ರ ಸಮಾಜದ ವರ್ತನೆ ಬದಲಾಗುತ್ತದೆ 'ಎಂದು ಪ್ರಮುಖ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಜಾಕೋಬ್ ಥಾಮಸ್ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಮತ್ತು ಎನ್ ಡಿ ಎ ಯ ನಿಲುವನ್ನು ಒಪ್ಪಿಕೊಳ್ಳುತ್ತೇನೆ ಎಂದು ಜಾಕೋಬ್ ಥಾಮಸ್ ಹೇಳಿದ್ದಾರೆ. ಎನ್ ಡಿ ಎ ನನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ನನಗೆ ಖಾತ್ರಿಯಿದೆ. ಕೇರಳದ ಅನೇಕ ವಿಷಯಗಳ ಬಗ್ಗೆ ಅವರ ನಿಲುವು ಸಾರ್ವಜನಿಕರ ಮುಂದೆ ಇದೆ 'ಎಂದು ಜಾಕೋಬ್ ಥಾಮಸ್ ಹೇಳಿರುವರು.





