ಬದಿಯಡ್ಕ: ಧಮನಿತರ ಬಾಳಿಗೆ ಬೆಳಕು ನೀಡಿದ ಭಾರತದ ನವೋತ್ಥಾನ ನಾಯಕ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಲು ಎಲ್ಲರೂ ಬದ್ಧರಾಗಬೇಕೆಂದು ಅಂಬೇಡ್ಕರ್ ವಿಚಾರ ವೇದಿಕೆಯ ಗೌರವಾಧ್ಯಕ್ಷ ಚಂದ್ರಶೇಖರ್ ಬದಿಯಡ್ಕ ಹೇಳಿದರು.
ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ವೇದಿಕೆಯ ಸದಸ್ಯೆ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಶಾಂತಾ ಬಾರಡ್ಕ ಅವರನ್ನು ಅಭಿನಂದಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಚಂದ್ರಶೇಖರ ಮಾತನಾಡಿದರು.
ನಿವೃತ್ತ ಗ್ರಾಮಾಧಿಕಾರಿ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತ ಡಿ ಕೃಷ್ಣ ದರ್ಬೆತ್ತಡ್ಕ ಅವರು ಶಾಂತಾ ಅವರನ್ನು ಅಭಿನಂದಿಸಿ ಗೌರವಿಸಿದರು. ಮದರು ಮಹಾಮಾತೆ ಮೊಗೇರ ಸಮಾಜದ ಅಧ್ಯಕ್ಷ ವಸಂತ ಅಜಕ್ಕೋಡು ಮುಖ್ಯ ಅತಿಥಿಯಾಗಿದ್ದರು. ವೇದಿಕೆ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ಸೀತಮ್ಮ ಬಾರಡ್ಕ ಶುಭ ಹಾರೈಸಿದರು. ನಾರಾಯಣ ನೂಜಿ ಸಹಿತ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಶಾಂತಾ ಬಾರಡ್ಕ ಅವರು ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು. ವಿಶ್ವನಾಥ್ ಬಿ.ಕೆ ಶುಭಾಶಂಸನೆಗೈದರು. ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ವಸಂತ ಬಾರಡ್ಕ ವಂದಿಸಿದರು.





