ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕೊಲ್ಲಂಗಾನದ ನವರಂಗ ಆಟ್ರ್ಸ್-ಸ್ಪೋಸ್ರ್ಟ್ ಕ್ಲಬ್ ಆಶ್ರಯದಲ್ಲಿ ಮಂಗಳವಾರ ಕೊಲ್ಲಂಗಾನದಲ್ಲಿ ಗಣರಾಜ್ಯೋತ್ಸವ ನಡೆಯಿತು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ರಾಷ್ಟ್ರ ಧ್ವಜಾರೋಹಣಗೈದರು. ಕ್ಲಬ್ ಅಧ್ಯಕ್ಷ ಕಿಶೋರ್ ಚಂದ್ರ ರೈ ಅಧ್ಯಕ್ಷತೆ ವಹಿಸಿದ್ದರು. ಮನೋಜ್ ಕುಮಾರ್ ಕೊಲ್ಲಂಗಾನ, ಸುರೇಶ್ ನಾಯ್ಕ್ ಕೊಲ್ಲಂಗಾನ, ಸುರೇಶ್ ರಾಜ್ ಶೆಟ್ಟಿ ಕೊಲ್ಲಂಗಾನ, ಅಕ್ಷಿತ ಡಿ.ಎನ್,ಶಾಲಿನಿ ದೇವರಕೆರೆ, ಅನನ್ಯ ಮೊದಲಾದವರು ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ನಿರೂಪಿಸಿದರು. ಕ್ಲಬ್ ಖಜಾಂಜಿ ಉದಯಕುಮಾರ್ ಆಚಾರ್ಯ ವಂದಿಸಿದರು.





