ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ.ಧ್ವಜಾರೋಹಣಗೈದರು. ಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿ, ಮಧುಮತಿ ಕಂಬಾರ್, ಸಹನಾ, ಅಂಗನವಾಡಿ ಶಿಕ್ಷಕಿ ಉಷಾ, ಶಾಲಿನಿ, ಹೆತ್ತವರು ಉಪಸ್ಥಿತರಿದ್ದರು.





