ತಿರುವನಂತಪುರ: ತಿರುವನಂತಪುರ ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ಖಾಸಗಿ ಸಹಭಾಗಿತ್ವ ಪಡೆಯುವ ಬಗ್ಗೆ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಹೇಳಿರುವುದೆಲ್ಲ ಶುದ್ದ ಸುಳ್ಳು ಎಂದು ಕೇಂದ್ರ ಸಚಿವ ವಿ ಮುರಲೀಧರನ್ ಹೇಳಿದ್ದಾರೆ. ಸರ್ಕಾರವೇ ಹರಾಜಿನಲ್ಲಿ ಭಾಗವಹಿಸಿದ ನಂತರ ವರ್ಗಾವಣೆ ಸರಿಯಾಗಿಲ್ಲ ಎಂಬುದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿಲಕ್ಷಣ ವಾದ ಎಂದು ವಿ ಮುರಲೀಧರನ್ ಅವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ. ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರಿಸಿದ್ದಾರೆ ಏಕೆಂದರೆ ಅದು ಸರ್ಕಾರಿ ಸ್ವಾಮ್ಯದ ಕಂಪನಿಗಿಂತ ಹೆಚ್ಚಿನ ಬಿಡ್ ತೋರಿಸಿದೆ ಎಂದು ಮುರಳೀಧರನ್ ಸಮಜಾಯಿಷಿ ನೀಡಿದರು.
"ಅದಾನಿ ಸಮೂಹದ ಬಿಡ್ 168 ಕೋಟಿ ರೂ. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿg Àುವ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು 135 ಕೋಟಿ ರೂ. ಮುಂದಿರಿಸಿತ್ತು. ಬಿಡ್ಡಿಂಗ್ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಸಲಾಯಿತು. ಮುಂದಿನ 50 ವರ್ಷಗಳ ಕಾಲ ತಿರುವನಂತಪುರಂ ವಿಮಾನ ನಿಲ್ದಾಣ ಅದಾನಿ ಒಡೆತನದಲ್ಲಿರಲಿದ್ದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಿಮಾನ ನಿಲ್ದಾಣವನ್ನು ನಿರ್ವಹಿಸುವಲ್ಲಿ ಅನುಭವವಿದೆ ಎಂದು ಹೇಳುವ ಮುಖ್ಯಮಂತ್ರಿ ಕಂಪನಿಯಾದ ಸಿಯಾಲ್‍ಗೆ ಬಿಡ್ಡಿಂಗ್ ಮಾಡದೆ ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಲು ಯಾರು ಆಸಕ್ತಿ ಹೊಂದಿದ್ದಾರೆಂದು ಸಿಎಂ ಸ್ಪಷ್ಟಪಡಿಸಬೇಕು. ಶಿವಶಂಕರ ಸೇರಿದಂತೆ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿಯ ಕೈವಾಡ ಗೊತ್ತಿದ್ದೂ ಅದರ ಬಳಿಕವೂ ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ದೂಷಿಸಬಾರದು ಎಂದು ಮುರಳೀಧರನ್ ಹೇಳಿದ್ದಾರೆ.
ಇದೇ ವೇಳೆ ಎಂಡಿ ಬಿಜು ಪ್ರಭಾಕರ್ ಅವರು ಕೆಎಸ್ ಆರ್ ಟಿಸಿಯಲ್ಲಿನ ಅಕ್ರಮಗಳ ಬಗ್ಗೆ ಬಹಿರಂಗವಾಗಿ ಹೇಳಿರುವುದನ್ನು ಗಮನಿಸಬೇಕು. ರಸ್ತೆಸಾರಿಗೆ ವ್ಯವಸ್ಥೆಯನ್ನೇ ನಿಭಾಯಿಸದವರು ವಿಮಾನ ನಿಲ್ದಾಣವನ್ನು ವಹಿಸಲು ಮುಂದೆ ಬರುತ್ತಿರುವುದು ಹಾಸ್ಯಾಸ್ಪದ ಎಂದು ಮುರಳೀಧರನ್ ಲೇವಡಿಗೈದಿದ್ದಾರೆ.





