ಮಂಜೇಶ್ವರ: ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ಫೆಬ್ರವರಿ 11ನೇ ಗುರುವಾರ ವಿವಿದ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಬೆಳಿಗ್ಗೆ 7ರಿಂದ ಉಷಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಏಕಾದಶ ರುದ್ರಾಭಿಷೇಕ, 930ರಿಂದ ಭಜನೆ, 10.30ರಿಂದ ಇತ್ತೀಚೆಗೆ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾದ ಡಾ.ಜಯಪ್ರಕಾಶ ನಾರಾಯಾಣ ತೊಟ್ಟೆತ್ತೋಡಿ ಯವರಿಗೆ ಸಾರ್ವಜನಿಕ ಸನ್ಮಾನ, ಮಧ್ಯಾಹ್ನ 12ರಿಂದ ಮಹಾಪೂಜೆ, ಶ್ರೀದೇವರಬಲಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 7ಕ್ಕೆ ರಂಗಪೂಜೆ, 8ರಿಂದ ಭೂತಬಲಿ ಉತ್ಸವ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಜರಗಲಿದೆ. ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.





