HEALTH TIPS

ವಿಧಾನಸಭೆ ಚುನಾವಣೆ; ಫೆಬ್ರವರಿ 15 ರ ನಂತರ ದಿನಾಂಕಗಳ ಪ್ರಕಟ- ತಮಿಳುನಾಡು, ಕೇರಳ ಮತ್ತು ಪುದುಚೇರಿ. ಚುನಾವಣೆಗಳು ಒಂದೇ ಹಂತದಲ್ಲಿ ಸಾಧ್ಯತೆ

                         

        ನವದೆಹಲಿ: ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಸಂಬಂಧ ಫೆಬ್ರವರಿ 15 ರ ನಂತರ ದಿನಾಂಕಗಳ ಪ್ರಕಟಣೆ ನಡೆಯಲಿದೆ. ಈ ಬಗ್ಗೆ ಚುನಾವಣಾ ಆಯೋಗವು ವರದಿ ಪ್ರಕಟಿಸಲಿದೆ. ಚುನಾವಣಾ ಆಯೋಗವು ದಕ್ಷಿಣ ರಾಜ್ಯಗಳ ಚುನಾವಣಾ ಸಂಬಂಧಿ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿದೆ. 

         ಚುನಾವಣಾ ಆಯೋಗದ ಅಧಿಕೃತರ ಪ್ರವಾಸ ಫೆಬ್ರವರಿ 15 ಕ್ಕೆ ಕೊನೆಗೊಳ್ಳುತ್ತದೆ. ಮಾರ್ಚ್ 1 ರಂದು ಅಂತಿಮವಾಗಿ ಚುನಾವಣೆ ನಡೆಸುವ  ದಿನಾಂಕವನ್ನು ಘೋಷಿಸಲು ಆಯ್ಕೆ ಮಾಡಲಾಗಿದೆ ಎಂದು ಆಯೋಗವು ಮೂಲಗಳಿಗೆ ಮಾಹಿತಿ ನೀಡಿದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು  ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಚುನಾವಣಾ ಆಯುಕ್ತರು ತೆಗೆದುಕೊಳ್ಳುತ್ತಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಆರರಿಂದ ಎಂಟು ಹಂತಗಳಲ್ಲಿ ನಡೆಯಲಿದೆ. ಎರಡು ಅಥವಾ ಮೂರು ಹಂತಗಳಲ್ಲಿ ಮತದಾನ ನಡೆಸುವ ಸಾಧ್ಯತೆಯೂ ಇದೆ. ಈ ಎಲ್ಲಾ ರಾಜ್ಯಗಳಲ್ಲಿ, ಮತಗಳನ್ನು ಒಂದೇ ದಿನ ಎಣಿಕೆ ಮಾಡಲಾಗುತ್ತದೆ.

          ಎಲ್ಲಾ ರಾಜ್ಯಗಳಲ್ಲಿ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು, ಸಿಬಿಎಸ್‍ಇ ಮಂಡಳಿ ಪರೀಕ್ಷೆ ಸಹಿತ  ಮೇ 1 ರ ಮೊದಲು ಪೂರ್ಣಗೊಳಿಸಲು ಆಯೋಗ ತಿಳಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries