ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ. ವೇತನ ವಿತರಣೆ ಇಂದಿನಿಂದ(ಮಂಗಳವಾರ)ಆರಂಭಗೊಳ್ಳಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಎಂ.ಡಿ. ಬಿಜು ಪ್ರಭಾಕರ್ ಈ ಬಗ್ಗೆ ಸೋಮವಾರ ಮಾಹಿತಿ ನೀಡಿ, ಸರ್ಕಾರ 70 ಕೋಟಿ ರೂ.ಗಳನ್ನು ವೇತನ ವಿತರಣೆಗೆ ಮಂಜೂರು ಮಾಡಿದೆ. ಈ ಮೊತ್ತವು 1500 / - ರೂ.ಗಳ ಮಧ್ಯಂತರ ಪರಿಹಾರವನ್ನು ಒಳಗೊಂಡಿದೆ ಎಂದಿರುವರು.
ಪ್ರಯಾಣ ಟಿಕೆಟ್ ಹೊರತಾಗಿ ಆದಾಯವನ್ನು ಹೆಚ್ಚಿಸಲು ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ನೇರವಾಗಿ ಜಾಹೀರಾತುಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಜಾಹೀರಾತಿಗಾಗಿ ಇನ್ನು ಹೊರಗುತ್ತಿಗೆ ನೀಡಲಾಗುವುದಿಲ್ಲ. ಆದರೆ ಪ್ರತಿ ಡಿಪ್ಪೋದಲ್ಲೂ ಸ್ಥಳೀಯ ಏಜೆಂಟರಿಂದ ಜಾಹೀರಾತುಗಳನ್ನು ಸ್ವೀಕರಿಸುವ ಮತ್ತು ಅವರಿಗೆ ಕಮಿಷನ್ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಎಂ.ಡಿ.ಸ್ಪಷ್ಟವಾಗಿ ತಿಳಿಸಿರುವರು.





