ತಿರುವನಂತಪುರ: ಪ್ರಯಾಣಿಕರಿಗೆ ಆನ್‍ಲೈನ್‍ನಲ್ಲಿ ಬಸ್ ಟಿಕೆಟ್ ಕಾಯ್ದಿರಿಸಲು ಐ.ಆರ್.ಸಿ.ಟಿ.ಸಿ. ಈಗ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಬಸ್ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವಿಕೆ ಸುಲಲಿತವಾಗಲಿದೆ.
ಬಳಕೆದಾರರಿಗೆ ಆನ್‍ಲೈನ್‍ನಲ್ಲಿ ಬಸ್ ಟಿಕೆಟ್ ಕಾಯ್ದಿರಿಸಲು https://www.bus.irctc.co.in/home ಗೆ ಸಂಪರ್ಕಿಸಬಹುದು. ಅಲ್ಲಿ ನಿರ್ಗಮನ
ವಿವರಗಳು ಮತ್ತು ಆಗಮನದ ವಿವರಗಳನ್ನು ಒದಗಿಸಬಹುದು. ಪ್ರಯಾಣಿಕರಿಗೆ ಆಸನಗಳು, ಇಚ್ಚಿಸುವ ಬಸ್ಸುಗಳನ್ನು ಆಯ್ಕೆ ಮಾಡಬಹುದು.
"ರೈಲ್ವೆ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ನೇತೃತ್ವದಲ್ಲಿ, ಐ.ಆರ್.ಸಿ.ಟಿ.ಸಿ ಕ್ರಮೇಣ ದೇಶದ ಮೊದಲ ಸರ್ಕಾರಿ ನಿಯಂತ್ರಿತ ವ್ಯಾವಹಾರಿಕ ಪ್ರಯಾಣ ಪೆÇೀರ್ಟಲ್ ಆಗುತ್ತಿದೆ" ಎಂದು ಐ.ಆರ್.ಸಿ.ಟಿ.ಸಿ ತಿಳಿಸಿದೆ. ಬಳಕೆದಾರರಿಗೆ ಹೆಚ್ಚು ಸಮಗ್ರ ಪ್ರಯಾಣದ ಅನುಭವವನ್ನು ನೀಡುತ್ತದೆ. ಈಗಾಗಲೇ ಆನ್‍ಲೈನ್ ರೈಲು ಮತ್ತು ವಿಮಾನ ಟಿಕೆಟ್‍ಗಳನ್ನು ಕಾಯ್ದಿರಿಸುವಂತೆ ಇನ್ನು ಐ.ಆರ್.ಸಿ.ಟಿ.ಸಿ. ಯಲ್ಲಿ ಬಸ್ ಕಾಯ್ದಿರಿಸುವಿಕೆ ಸಾಧ್ಯವಾಗಲಿದೆ.
ಬಸ್‍ಗಳನ್ನು ಕಾಯ್ದಿರಿಸುವ ಮೊದಲು ಬಳಕೆದಾರರು ಬಸ್‍ಗಳ ಚಿತ್ರಗಳನ್ನು ಸಹ ಪರಿಶೀಲಿಸಬಹುದು. ಒಂದು ವಹಿವಾಟಿನಲ್ಲಿ ಗರಿಷ್ಠ ಆರು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಬಹುದು ಎಂದು ವೆಬ್‍ಸೈಟ್ ಹೇಳಿದೆ.
ಯು.ಪಿ.ಎಸ್.ಆರ್.ಟಿ.ಟಿ.ಸಿ, ಎಪಿಎಸ್.ಆರ್.ಟಿಸಿ, ಜಿಎಸ್.ಆರ್.ಟಿ.ಸಿ, ಒಎಸ್.ಆರ್.ಟಿಸಿ ಮತ್ತು ಕೇರಳ ಆರ್.ಟಿ.ಸಿಯಂತಹ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಎಲ್ಲಾ ಬಸ್ಸುಗಳನ್ನು ಬಳಕೆದಾರರು ಕಾಯ್ದಿರಿಸಬಹುದು.ಈ ಸೇವೆಗಳನ್ನು ಮಾರ್ಚ್ ಮೊದಲ ವಾರದಲ್ಲಿ ಐ/ಎಸ್.ಆರ್.ಟಿ.ಸಿ. ಮೊಬೈಲ್ ಅಪ್ಲಿಕೇಶನ್‍ನಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಇದು ಸಾರ್ವಜನಿಕರಿಗೆ ಮೊಬೈಲ್ ಮೂಲಕ ಬಸ್ ಟಿಕೆಟ್ ಕಾಯ್ದಿರಿಸಲು ಸಹಾಯ ಮಾಡುತ್ತದೆ.
50,000 ಕ್ಕೂ ಹೆಚ್ಚು ರಾಜ್ಯ ರಸ್ತೆ ಸಾರಿಗೆ ಮತ್ತು 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಖಾಸಗಿ ಬಸ್ ನಿರ್ವಾಹಕರ ಸಹಯೋಗದೊಂದಿಗೆ ಐ.ಆರ್.ಸಿ.ಟಿ.ಸಿ ಗ್ರಾಹಕರಿಗೆ ಆನ್‍ಲೈನ್ ಬಸ್ ಬುಕಿಂಗ್ ಸೇವೆಗಳನ್ನು ಒದಗಿಸುತ್ತದೆ.





