ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಪ್ರಚಾರಕ್ಕೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ ಮೈದಾನಗಳನ್ನುನಿಗದಿ ಪಡಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಪ್ರಕಟಿಸಿದ್ದಾರೆ.
ಮಂಜೇಶ್ವರ ವಿಧಾನಸಭೆ ಕ್ಷೇತ್ರ: ಮಣ್ಣಂಗುಳಿ ಮೈದಾನ, ಪೈವಳಿಕೆ ನಗರ ಶಾಲೆ ಮೈದಾನ, ಪೆರ್ಲ ಶ್ರೀ ಸತ್ಯನಾರಾಯಣ ಶಾಲೆ ಮೈದಾನ, ಮೀಯಪದವು ವಿದ್ಯಾವರ್ಧಕ ಶಾಲೆ ಮೈದಾನ, ಮಜೀರ್ ಪಳ್ಳ ಸಂತ ಜೋಸೆಫ್ ಶಾ;ಲೆ ಮೈದಾನ.
ಕಾಸರಗೋಡು ವಿಧಾನಸಭೆ ಕ್ಷೇತ್ರ: ತಾಳಿಪಡ್ಪು ಮೈದಾನ, ಚೆರ್ಕಳ ಸೆಂಟ್ರಲ್ ಶಾಲೆ ಮೈದಾನ, ಬದಿಯಡ್ಕ ಗ್ರಾಮ ಪಂಚಾಯತ್ ಮೈದಾನ, ಉಳಿಯತ್ತಡ್ಕ ಸಿರಿಬಾಗಿಲು ಶಾಲೆ ಮೈದಾನ, ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ.
ಉದುಮಾ ವಿಧಾನಸಭೆ ಕ್ಷೇತ್ರ: ಕುತ್ತಿಕೋಲು ಸರಕಾರಿ ಪ್ರೌಢಶಾಲೆ ಮೈದಾನ, ಕುಂಡಂಕುಳಿ ಸರಕಾರಿ ಪ್ರೌಢಶಾಲೆ ಮೈದಾನ, ಬೋವಿಕ್ಕಾನ ಮುಳೀಯಾರು ಗ್ರಾಮ ಪಂಚಾಯತ್ ಮೈದಾನ, ಉದುಮಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನ.
ಕಾಞಂಗಾಡ್ ವಿಧಾನಸಭೆ ಕ್ಷೇತ್ರ: ಮಾಂತೋಪ್ ಮೈದಾನ, ಪುದಿಯಕೋಟೆ, ಮಾವುಂಗಾಲ್ ಮಿಲ್ಮಾ ಘಟಕದ ಬಳಿಯ ಮೈದಾನ, ಪರಪ್ಪ ಚಾಯೋಂಗೋಡು ಜಂಕ್ಷನ್ ಬಳಿಯ ಮೈದಾನ, ತೊಟ್ಟಮ್ಮಲ್ ಅಟ್ಟೆಂಗಾನ ಕಿರು ಸ್ಟೇಡಿಯಂ.
ತ್ರಿಕರಿಪುರ ವಿಧಾನಸಭೆ ಕ್ಷೇತ್ರ: ಕಾಲಿಕಡವು ಪಂಚಾಯತ್ ಮೈದಾನ, ತ್ರಿಕರಿಪುರ ರೈಲು ನುಇಲ್ದಾಣ ಬಳಿಯ ಮೈದಾನ, ಪಂಚಾಯತ್ ಕಚೇರಿ ಬಳಿಯ ಮೈದಾನ, ಚೀಮೇನಿ, ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮೈದಾನ, ತೋಮಪುರಂ ಸಂತ ಥಾಮಸ್ ಪ್ರೌಢಶಾಲೆ ಮೈದಾನ.
ಅಭ್ಯರ್ಥಿಗಳ ಮನವಿಯ ಹಿನ್ನೆಲೆಯಲ್ಲಿ ಆಯಾ ಚುನಾವಣೆ ಅಧಿಕಾರಿಗಳು ಮೈದಾನವನ್ನು ಆದ್ಯತೆಯ ಪ್ರಕಾರ ಮಂಜೂರುಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.



