HEALTH TIPS

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಪ್ರೊ.ಅಮೃತ ಸೋಮೇಶ್ವರ ಸೇರಿ ಐವರಿಗೆ ಗೌರವ ಪ್ರಶಸ್ತಿ

            ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಸೇರಿ ಐವರು, 2020ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಹಿರಿಯ ಲೇಖಕ ಡಾ.ರಾಜಪ್ಪ ದಳವಾಯಿ ಸೇರಿ 10 ಮಂದಿ ಆಯ್ಕೆಯಾಗಿದ್ದಾರೆ. ಸತ್ಯಮಂಗಲ ಮಹಾದೇವ ಸೇರಿ 18 ಲೇಖಕರು 2019ನೇ ಸಾಲಿನ ಪುಸ್ತಕ ಬಹುಮಾನ, 9 ಲೇಖಕರು ದತ್ತಿ ಬಹುಮಾನ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.


            ಶುಕ್ರವಾರ ಕನ್ನಡ ಭವನದಲ್ಲಿ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ ಪ್ರಶಸ್ತಿ ಪಟ್ಟಿ ಬಿಡುಗಡೆಗೊಳಿಸಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು 50 ಸಾವಿರ ರೂ.ನಗದು, ಸಾಹಿತ್ಯಶ್ರೀ ಪ್ರಶಸ್ತಿಯು 25 ಸಾವಿರ ರೂ.ನಗದು, ಪುಸ್ತಕ ಬಹುಮಾನ ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು

1. ಪ್ರೊ.ಅಮೃತ ಸೋಮೇಶ್ವರ

2. ವಿದ್ವಾನ್.ಷಣ್ಮುಖಯ್ಯ ಅಕ್ಕೂರಮಠ

3. ಡಾ.ಕೆ.ಕೆಂಪೇಗೌಡ

4. ಡಾ.ಕೆ.ಆರ್.ಸಂಧ್ಯಾರೆಡ್ಡಿ

5. ಅಶೋಕಪುರಂ ಕೆ.ಗೋವಿಂದರಾಜು

2020ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು

1. ಪ್ರೇಮಶೇಖರ

2. ಡಾ.ರಾಜಪ್ಪ ದಳವಾಯಿ

3. ಬಿ.ಟಿ.ಜಾಹ್ನವಿ

4. ಪ್ರೊ.ಕಲ್ಯಾಣರಾವ್ ಜಿ.ಪಾಟೀಲ್

5. ಡಾ.ಜೆ.ಪಿ.ದೊಡ್ಡಮನಿ

6. ಡಾ.ಮೃತ್ಯುಂಜಯ ರುಮಾಲೆ

7. ಡಿ.ವಿ.ಪ್ರಹ್ಲಾದ್

8. ಡಾ.ಎಂ.ಎಸ್.ಆಶಾದೇವಿ

9. ಶಿವಾನಂದ ಕಳವೆ

10. ವೀಣಾ ಬನ್ನಂಜೆ

2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

1. ಸತ್ಯಮಂಗಲ ಮಹಾದೇವ-ಪಂಚವರ್ಣದ ಹಂಸ(ಕಾವ್ಯ)

2. ಸುಮಿತ್ ಮೇತ್ರಿ-ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ(ನವಕವಿಗಳ ಪ್ರಥಮ ಸಂಕಲನ)

3. ವಸುಧೇಂದ್ರ - ತೇಜೋ ತುಂಗಭದ್ರ(ಕಾದಂಬರಿ)

4. ಲಕ್ಷ್ಮಣ ಬಾದಾಮಿ-ಒಂದು ಚಿಟಿಕೆ ಮಣ್ಣು(ಸಣ್ಣಕತೆ)

5. ಉಷಾ ನರಸಿಂಹನ್-ಕಂಚುಗನ್ನಡಿ(ನಾಟಕ)

6. ರಘುನಾಥ ಚ.ಹ-ಬೆಳ್ಳಿತೊರೆ(ಲಲಿತ ಪ್ರಬಂಧ)

7. ಡಿ.ಜಿ.ಮಲ್ಲಿಕಾರ್ಜುನ-ಯೋರ್ದಾನ್ ಪಿರೆಮಸ್(ಪ್ರವಾಸ ಸಾಹಿತ್ಯ)

8. ಬಿ.ಎಂ.ರೋಹಿಣಿ-ನಾಗಂದಿಗೆಯೊಳಗಿಂದ(ಜೀವನ ಚರಿತ್ರೆ)

9. ಡಾ.ಗುರುಪಾದ ಮರಿಗುದ್ದಿ-ಪೊದೆಯಿಂದಿಳಿದ ಎದೆಯ ಹಕ್ಕಿ(ಸಾಹಿತ್ಯ ವಿಮರ್ಶೆ)

10. ವಸುಮತಿ ಉಡುಪ-ಅಭಿಜಿತನ ಕತೆಗಳು(ಮಕ್ಕಳ ಸಾಹಿತ್ಯ)

11. ಡಾ.ಕೆ.ಎಸ್.ಪವಿತ್ರ-ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು(ವಿಜ್ಞಾನ ಸಾಹಿತ್ಯ)

12. ಡಾ.ಮಹಾಬಲೇಶ್ವರ ರಾವ್-ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು(ಮಾನವಿಕ)

13. ಡಾ.ಚನ್ನಬಸವಯ್ಯ ಹಿರೇಮಠ-ಅನಾವರಣ(ಸಂಶೋಧನೆ)

14. ಗೀತಾ ಶೆಣೈ-ಕಾಳಿಗಂಗಾ(ಅನುವಾದ-1 ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ)

15. ಧರಣೇಂದ್ರ ಕುರಕುರಿ-ಜ್ವಾಲಾಮುಖಿ ಪರ್(ಅನುವಾದ-2, ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ)

16. ಸುಧಾ ಆಡುಕಳ-ಬಕುಲದ ಬಾಗಿಲಿನಿಂದ(ಅಂಕಣ ಬರಹ)

17. ಪ್ರೊ.ಡಿ.ವಿ.ಪರಶಿವಮೂರ್ತಿ, ಡಿ.ಸಿದ್ಧಗಂಗಯ್ಯ-ನೊಳಂಬರ ಶಾಸನಗಳು(ಸಂಕೀರ್ಣ)

18. ಕಪಿಲ ಪಿ.ಹುಮನಾಬಾದೆ-ಹಾಣಾದಿ(ಲೇಖಕರ ಮೊದಲ ಸ್ವತಂತ್ರ ಕೃತಿ)

2019ನೇ ಸಾಲಿನ ದತ್ತಿ ಬಹುಮಾನ ಪುರಸ್ಕೃತರು

1. ಅನುಪಮಾ ಪ್ರಸಾದ್-ಪಕ್ಕಿ ಹಳ್ಳದ ಹಾದಿಗುಂಟ(ಚದುರಂಗ ದತ್ತಿನಿಧಿ ಬಹುಮಾನ)

2. ನೀತಾ ರಾವ್-ಹತ್ತನೇ ಕ್ಲಾಸಿನ ಹುಡುಗಿಯರು(ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ)

3. ಡಾ.ಬಿ.ಪ್ರಭಾಕರ ಶಿಶಿಲ-ಬೊಗಸೆ ತುಂಬಾ ಕನಸು(ಸಿಂಪಿ ಲಿಂಗಣ್ಣ ದತ್ತಿನಿಧಿ)

4. ಡಾ.ಎಂ.ಉಷಾ-ಕನ್ನಡ ಮ್ಯಾಕ್‍ಬೆತ್‍ಗಳು(ಪಿ.ಶ್ರೀನಿವಾಸರಾವ್ ದತ್ತಿನಿಧಿ)

5. ಜಿ.ಎನ್.ರಂಗನಾಥ ರಾವ್-ಶ್ರೀ ಮಹಾಭಾರತ ಸಂಪುಟ 1, 2, 3 ಮತ್ತು 4(ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ)

6. ಭಾಗ್ಯಜ್ಯೋತಿ ಹಿರೇಮಠ-ಪಾದಗಂಧ(ಮಧುರಚೆನ್ನ ದತ್ತಿನಿಧಿ)

7. ಪ್ರಮೋದ್ ಮುತಾಲಿಕ್- ಬಿಯಾಂಡ್ ಲೈಫ್(ಅಮೆರಿಕ ಕನ್ನಡ ದತ್ತಿನಿಧಿ)

8. ಮಲ್ಲಿಕಾರ್ಜುನ ಕಡಕೋಳ-ಯಡ್ರಾಮಿ ಸೀಮೆ ಕಥನಗಳು(ಬಿ.ವಿ.ವೀರಭದ್ರಪ್ಪ ದತ್ತಿನಿದಿ)

9. ಲಕ್ಷ್ಮೀಕಾಂತ್ ಪಾಟೀಲ್-ಶ್ರೀ ಪ್ರಸನ್ನವೆಂಕಟದಾಸರ್ಯಕೃತ ಶ್ರೀ ಲಕ್ಷ್ಮಿದೇವಿ ಅಪ್ರಕಟಿತ ಸ್ತುತಿರತ್ನಗಳು(ಜಲಜಾ ಅಚಾರ್ಯ ಗಂಗೂರ್ ದತ್ತಿನಿಧಿ)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries