HEALTH TIPS

ಉಮ್ಮನ್ ಚಾಂಡಿಗೆ ಸೋಲಾರ್-ಪಿಣರಾಯಿಗೆ ಚಿನ್ನ- ಎರಡೂ ರಂಗಗಳು ಕೇರಳಕ್ಕೆ ಅವಮಾನ-ಜೆ.ಪಿ.ನಡ್ಡಾ

                    

          ತ್ರಿಶೂರ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇರಳದಲ್ಲಿ ಎಡ ಮತ್ತು ಬಲ ರಂಗಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೇರಳವನ್ನು ಸಾಲದಿಂದ ರಕ್ಷಿಸಲು ಪ್ರಧಾನಿ ಮತ್ತು ಎನ್ ಡಿ ಎ ಸಾಕಷ್ಟು ಪ್ರಯತ್ನಿಸುತ್ತಿದ್ದರೆ, ಎರಡೂ ರಂಗಗಳು ಕೇರಳಕ್ಕೆ ಕೆಟ್ಟ ಹೆಸರನ್ನು ನೀಡಿವೆ ಎಂದು ನಡ್ಡಾ ಹೇಳಿದರು. ಬಿಜೆಪಿಯ ವಿಧಾನಸಭಾ ಚುನಾವಣಾ ಪ್ರಚಾರದ ಔಪಚಾರಿಕ ಆರಂಭದಂದು ಅವರು ತ್ರಿಶೂರ್‍ನ ತೆಕ್ಕಿಂಕಾಡ್ ಮೈದಾನದಲ್ಲಿ ಸಮಾವೇಶವನ್ನು ಉದ್ಘಾಟಿಸಿ ನಿನ್ನೆ ಮಾತನಾಡಿದರು. 

        ರಾಜ್ಯದ ಎಲ್ಲಾ ಆಡಳಿತ ವ್ಯವಸ್ಥೆಗಳು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿವೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಮತ್ತು ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಭಾರೀ ಕೆಟ್ಟ ಹೆಸರನ್ನು ಮಾಡಿಕೊಂಡಿವೆ. ಒಬ್ಬರು ಚಿನ್ನವನ್ನು ಪ್ರೀತಿಸುತ್ತಿದ್ದರೆ, ಇನ್ನೊಬ್ಬರು ಸೋಲಾರ್ ಶಕ್ತಿಯ  ಪ್ರೀತಿಗೊಳಗಾದರು.  ಈ ಎಲ್ಲದರಲ್ಲೂ ಮಹಿಳೆಯರ ನೆರಳು ಇದೆ ಎಂದು ನಡ್ಡಾ ಗಮನಸೆಳೆದರು. ಇದನ್ನು ಹೇಳಲು ಕ್ಷಮಿಸಿ ಎಂದು ಅವರು ಸಭಿಕರಿಗೆ ತಿಳಿಸಿದರು. ಐದು ವರ್ಷಗಳಲ್ಲಿ ಕಾಂಗ್ರೆಸ್ ಗೆ ಮತ್ತೊಬ್ಬ ನಾಯಕ ಸಿಕ್ಕಿಲ್ಲ. ಅವರು ಮತ್ತೆ ಉಮ್ಮನ್ ಚಾಂಡಿಯನ್ನು ಮತ್ತೆ ಎಳೆತಂದಿದ್ದಾರೆ. ಎರಡು ರಂಗಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ನಡ್ಡಾ ಹೇಳಿದರು.

           ಕೇರಳಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ನಡ್ಡಾ ಗಮನಸೆಳೆದರು. ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‍ಲೈನ್ ಯೋಜನೆ, ಕೊಚ್ಚಿನ್ ಶಿಪ್ ಯಾರ್ಡ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಭಾರತ್ ಮಾಲಾ ಯೋಜನೆಯನ್ನು ನಡ್ಡಾ ಉಲ್ಲೇಖಿಸಿದರು.  ಪುಟ್ಟಿಂಗಲ್ ಅಪಘಾತದ ಮೂರು ಗಂಟೆಗಳಲ್ಲಿ ಪ್ರಧಾನಿ ಕೇರಳಕ್ಕೆ ಬಂದರು. ಪ್ರಸ್ತುತ ಕೊರೋನಾ ವಿಸ್ತರಣೆಯ ಸಂದರ್ಭದಲ್ಲಿ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರವನ್ನು ಶೇಕಡಾ 137 ರಷ್ಟು ಹೆಚ್ಚಿಸಲಾಗಿದ್ದು, ಕೇರಳಕ್ಕೂ ಇದರ ಲಾಭವಾಗಲಿದೆ ಎಂದು ಜೆ.ಪಿ.ನಡ್ಡಾ ಹೇಳಿದರು. ವಿದೇಶದಲ್ಲಿ ಉಗ್ರರು ಬಂಧನಕ್ಕೊಳಗಾದ ಮಲಯಾಳಿ ದಾದಿಯರ ಬಿಡುಗಡೆಯನ್ನೂ ನಡ್ಡಾ ಉಲ್ಲೇಖಿಸಿದ್ದಾರೆ.

        ತ್ರಿಶೂರ್ ನ ಸಾಂಸ್ಕøತಿಕ ವೈವಿಧ್ಯತೆಯನ್ನು ಪ್ರಸ್ತಾಪಿಸಿ  ನಡ್ಡಾ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ತ್ರಿಶೂರ್ ಶಿವ ಮತ್ತು ಗುರುವಾಯೂರ್ ಕೃಷ್ಣ ದೇವಸ್ಥಾನಕ್ಕೆ  ಹೆಸರುವಾಸಿಯಾಗಿದೆ. ಅದರ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಡ್ಡಾ ಹೇಳಿದರು. ನಡ್ಡಾ ತ್ರಿಶೂರ್ ಪೂರಂ ಬಗ್ಗೆಯೂ ಪ್ರಸ್ತಾಪಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries