ಮಂಜೇಶ್ವರ: ಮಂಜೇಶ್ವರ ಲೋಕೋಪಯೋಗಿ ಅತಿಥಿಗೃಹದ ನೂತನ ಬ್ಲಾಕ್ ಉದ್ಘಾಟನೆ ಶುಕ್ರವಾರ ಜರಗಿತು. ಆನ್ ಲೈನ್ ಮೂಲಕ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಜ್ಯದಲ್ಲಿರುವ 155 ಲೋಕೋಪಯೋಗಿ ಅತಿಥಿಗೃಹಗಳಲ್ಲಿ 25 ಗೃಹಗಳು ಈ ಸರ್ಕಾರದ ಅವಧಿಯಲ್ಲಿ ಪೂರ್ಣಗೊಂಡಿವೆ ಎಂದವರು ನುಡಿದರು.
ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಂಸೀನಾ ಟೀಚರ್, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮಂತೇರೋ ಮೊದಲಾದವರು ಉಪಸ್ಥಿತರಿದ್ದರು.







